ಸುದ್ದಿ9 ಬಂಟ್ವಾಳ; ಗುಜರಾತ್ ನಲ್ಲಿ ನರಮೇಧ ಮಾಡಿದ್ದಕ್ಕೆ ಮೋದಿಗೆ ಓಟು ಕೊಡಬೇಕಾ..? ಗುಜರಾತ್ ಗಲಭೆದಾರನ ಹೆಸರಲ್ಲಿ ಮತಕೇಳುವ ಬಿಜೆಪಿಗರಿಗೆ ತಮ್ಮ ಅಭ್ಯಥರ್ಿಯ ಪರವಾಗಿ ವಾದಿಸುವ ನೈತಿಕತೆ ಇಲ್ಲ, ನಳಿನ್ ಕುಮಾರ್ ಕಟೀಲು ಕಾಂಗ್ರೇಸ್ ನೇತೃತ್ವದ ಕೇಂದ್ರಸಕರ್ಾರ ನೀಡಿದ ಲೋಕಸಭೆಯ ಅನುದಾನವನ್ನು ಹೊರತುಪಡಿಸಿ, ಒಂದು ಪೈಸೆ ಹೆಚ್ಚಿಗೆ ಅನುದಾನ ನೀಡಿದ್ದರೆ ಕಾಲು ಹಿಡಿಯಲು ಸಿದ್ದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಶನಿವಾರ ಬೆಳಿಗ್ಗೆ ಬಿ.ಸಿ.ರೋಡ್ನಿಂದ ಆರಂಭಗೊಂಡ “ಸಾಮರಸ್ಯಕ್ಕಾಗಿ ಕಾಂಗ್ರೇಸ್ ನಡಿಗೆ” ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ಭೂ ಸುಧಾರಣೆಯಂತಹಾ ಜನಹಿತ ಕಾರ್ಯಕ್ರಮಗಳನ್ನು ಜಾರಿಗೆ ತಂದ ಇಂದಿರಾಗಾಂಧೀಜಿಯವರ ಆತ್ಮಕ್ಕೆ ಶಾಂತಿಸಿಗಬೇಕಿದ್ದರೆ ಕಾಂಗ್ರೇಸ್ಸಿಗೆ ಮತ ನೀಡಿ ಎಂದ ಅವರು, ಬಿಜೆಪಿಯ ಅಧಿಕಾರದಾಹದಲ್ಲಿ ಭ್ರಷ್ಟಾಚಾರ ಮಾಡಿ, ಅಧಿಕಾರಕ್ಕಾಗಿ ಪಕ್ಷ ಬಿಟ್ಟು, ಮತ್ತೆ ಅಧಿಕಾರಕ್ಕಾಗಿ ಭ್ರಷ್ಟಾಚಾರಿಗಳನ್ನು ಹತ್ತಿರ ಸೇರಿಸಿಕೊಂಡ ಬಿಜೆಪಿಗರು ಯಾವ ಮುಖದಲ್ಲಿ ಮತಕೇಳಲು ಬರುತ್ತಾರೆಯೋ ಎಂದ ಅವರು ಅಂತವರ ಬಗ್ಗೆ ಎಚ್ಚರವಹಿಸುವಂತೆ ಕಾರ್ಯಕರ್ತರಿಗೆ ಕರೆನೀಡಿದರು.

ಆರೋಗ್ಯ ಸಚಿವ ಯು.ಟಿ ಖಾದರ್ ಮಾತನಾಡಿ, ಜಿಲ್ಲೆಯ ಸಮಸ್ಯೆಯನ್ನು ದೇಶದ ಪಾಲರ್ಿಮೆಂಟಿನಲ್ಲಿ ಧ್ವನಿಸುವ ಶಕ್ತಿ ಇರುವುದು ಜನಾರ್ಧನ ಪೂಜಾರಿಯವರಲ್ಲಿ ಮಾತ್ರ ಎಂದರು. ಕಲ್ಲಡ್ಕ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಸಮಾಜ ಘಾತುಕ ಶಕ್ತಿಗಳಿಗೆ ರಾಜ್ಯ ಸಕರ್ಾರ ಸೂಕ್ತಸಮಯದಲ್ಲಿ ದಿಟ್ಟ ಉತ್ತರ ನೀಡಲಿದ್ದು, ಸಾಮರಸ್ಯದ ಪ್ರತೀಕವಾದ ಕಾಂಗ್ರೇಸ್ ನ ಕಾರ್ಯಕರ್ತರು ಶಾಂತಿಸೌಹಾರ್ದತೆಯನ್ನು ಸಾರುವಂತೆ ವಿನಂತಿಸಿದರು.
ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯಥರ್ಿ ಜನಾರ್ಧನ ಪೂಜಾರಿ ಮಾತನಾಡಿ, ಭಾರತ ದೇಶ ಸೂಪರ್ ಪವರ್ ಆಗಬೇಕೆಂದಿದ್ದರೆ, ಎಲ್ಲೆಡೆಯೂ ಶಾಂತಿ ನೆಲೆಸಬೇಕು, ಸಾಮರಸ್ಯಕ್ಕಾಗಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೇಸ್ಸಿಗರದು ಪುಣ್ಯದ ಕೆಲಸ ಎಂದರು.
ವೇದಿಕೆಯಲ್ಲಿ ಪಕ್ಷದ ಪ್ರಮುಖರಾದ ಐವನ್ ಡಿಸೋಜ, ಕಣಚೂರು ಮೋನು, ಮಹಮ್ಮದ್ ಬದ್ರುದ್ದೀನ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಮಮತಾ ಗಟ್ಟಿ, ಬಿ.ಹೆಚ್ ಖಾದರ್, ಎ.ಸಿ.ಭಂಡಾರಿ, ಕೃಪಾ ಅಮರ್ ಆಳ್ವ, ವಸಂತಿಚಂದಪ್ಪ, ಮೋಹನ್ ಕೆವಿ. ಯಾಸ್ಮಿನ್, ಪಿಯೂಸ್ ರೋಡ್ರಿಗಸ್, ಮಾಯಿಲಪ್ಪ ಸಾಲ್ಯಾನ್,ಅಬ್ಬಾಸ್ ಆಲಿ ಸುದರ್ಶನ್ ಜೈನ್, ಹರಿಕೃಷ್ಣ ಬಂಟ್ವಾಳ, ಬಿ.ಕೆ.ಇದಿನಬ್ಬ, ಶಾಹುಲ್ ಹಮೀದ್, ಅಬ್ಬಾಸ್ ಆಲಿ, ಸಂಜೀವ ಪೂಜಾರಿ, ಭೂಮಿಕಾ ರವಿಚಂದ್ರನ್, ಪದ್ಮಶೇಖರ್ ಜೈನ್, ಅಶ್ರಫ್, ಸಂಪತ್ ಕುಮಾರ್ ಶೆಟ್ಟಿ, ಮಾಧವಮಾವೆ ಮೊದಲಾದವರು ಉಪಸ್ಥಿತರಿದ್ದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ಬಾಸ್ ಆಲಿ ಸ್ವಾಗತಿಸಿದರು. ಸದಾಶಿವ ಬಂಗೇರ ವಂದಿಸಿದರು. ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.



