ಸುದ್ದಿ9 ಬಂಟ್ವಾಳ : ಭಕ್ತಿ ಶ್ರದ್ಧೆಯಿಂದ ಈ ಗುರುಮಂದಿರ ನಿರ್ಮಾಣವಾಗಿ ಶ್ರದ್ಧಾ ಕೇಂದ್ರವಾಗಲಿ . ಉತ್ತಮ ಗುರು ಸಂದೇಶದ ಮೂಲಕ ಈ ಸಂಘವು ಬೆಳಗಲಿ ಎಂದು ಶ್ರೀ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ನುಡಿದರು . ಅವರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸಜಿಪ ಮೂಡ ಮುನ್ನೂರು ಇದರ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 160ನೇ ಜನ್ಮ ದಿನಾಚರಣೆಯ ಪ್ರಯುಕ್ತ ನಡೆದ ಗುರುಪೂಜೆ , ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನೂತನ ಗುರುಮಂದಿರದ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನವಿತ್ತರು . ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಸಜಿಪ ಮೂಡ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು .
50 ಮಂದಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು .
ವೆದಿಕೆಯಲ್ಲಿ ಬಿಲ್ಲವ ಮಹಾ ಮಂಡಲದ ವಕ್ತಾರ ಹರಿಕೃಷ್ಣ ಬಂಟ್ವಾಳ , ಬಿಲ್ಲವ ಏಕೀಕರಣ ಸಮಿತಿ ಅಧ್ಯಕ್ಷ ರವಿಕುಮಾರ್ , ದೈವ ಪಾತ್ರಿ ಶಂಕರ ಯಾನೆ ಕೋಚ ಪೂಜಾರಿ , ಬಿಲ್ಲವ ಏಕೀಕರಣದ ಪ್ರಧಾನ ಕಾರ್ಯದರ್ಶಿ ದೀಪಕ್ ಕೋಟ್ಯಾನ್ , ನವೀನ್ ಸುವರ್ಣ , ಮೂರ್ತೆದಾರರ ಮಹಾಮಂಡಲದ ಉಪಾಧ್ಯಕ್ಷ ಶಿವಪ್ಪ ಸುವರ್ಣ , ಚಲನಚಿತ್ರ ನಟ ಭೋಜರಾಜ ವಾಮಂಜೂರು , ಇಂಜಿನಿಯರ್ ಸಂತೋಷ್ ಕುಮಾರ್ ಕೊಟ್ಟಿಂಜ ಉಪಸ್ಥಿತರಿದ್ದರು . ಅಧ್ಯಕ್ಷ ಕೆ. ಸಂಜೀವ ಪೂಜಾರಿ ಸ್ವಾಗತಿಸಿದರು . ದಿವಾಕರ ವಿದ್ಯಾನಗರ ವಂದಿಸಿ , ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು .

