ಸುದ್ದಿ9 ಬಂಟ್ವಾಳ: ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರವು ಗ್ರಾಮೀಣ ಭಾಗದಲ್ಲಿ ವಸತಿ ರಹಿತರಿಗೆ ರೂ 1.20ಲಕ್ಷ ವೆಚ್ಚದಲ್ಲಿ ಮನೆಕಟ್ಟಲು ಬಸವ ವಸತಿ ಯೋಜನೆಯ ಸಹಾಯಧನ ರಾಜೀವಗಾಂಧಿ ವಸತಿ ನಿಗಮ ಮುಖಾಂತರ ಮಂಜೂರಾತಿ ಮಾಡುತ್ತಿರುವುದು ಸರಿಯಷ್ಟೆ. ವಾರ್ಷಿಕ ಎರಡು ಹಂತದಲ್ಲಿ ಗ್ರಾಮ ಪಂಚಾಯತ್‍ಗಳಲ್ಲಿ ಗ್ರಾಮಸಭೆಗಳು ನಡೆಯುತ್ತಿರುವುದು. ಪ್ರತಿ ಗ್ರಾಮಸಭೆಗಳಲ್ಲಿ ವಸತಿ ರಹಿತ ಕುಟುಂಬದವರು ವಸತಿ ಸೌಲಭ್ಯ ಅಪೇಕ್ಷಿಸಿ ಅರ್ಜಿ ಹಾಕಿ ಗ್ರಾಮ ಪಂಚಾಯತಿಗಳಿಗೆ ತಿಂಗಳಿಗೊಮ್ಮೆ ಬಂದು ವಿಚಾರಿಸಿ ವಾಪಸ್ಸು ಹೋಗುತ್ತಿದ್ದಾರೆ. 2013-14ನೇ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯತ್‍ಗಳಿಗೆ ತಲಾ 20 ಮನೆಗಳನ್ನು ಬಸವ ವಸತಿ ಯೋಜನೆಯಡಿ ಮಂಜೂರಾತಿ ಮಾಡಿದ್ದನ್ನು ಬಿಟ್ಟರೆ ಇಷ್ಟರವರೆಗೆ ಅಂದರೆ 2014-15ನೇ ಆರ್ಥಿಕ ವರ್ಷದಲ್ಲಿ ಒಂದೇ ಒಂದು ಮನೆಯನ್ನು ಮಂಜೂರಾತಿ ಮಾಡಿರುವುದಿಲ್ಲ. ಇದರಿಂದ ಕಳೆದ ಒಂದು ವರ್ಷದಿಂದ ವಸತಿ ಯೋಜನೆಯ ಮನೆ ಮಂಜೂರಾತಿ ಆಗಬಹುದೆಂಬ ನಿರೀಕ್ಷೆಯಲ್ಲಿದ್ದ ವಸತಿ ರಹಿತ ಬಡ ಫಲಾನುಭವಿಗಳು ಕಂಗಾಲಾಗಿದ್ದಾರೆ.
ಆದುದರಿಂದ 2014-15ನೇ ಸಾಲಿಗೆ ಸಂಬಂಧಿಸಿದಂತೆ ಬಸವ ವಸತಿ ಯೋಜನೆಗಳು ಶೀಘ್ರ ಮಂಜೂರಾತಿ ಮಾಡುವರೇ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಾದ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಮೂಲಕ ಮನವಿ ಮಾಡಲಾಗಿದೆ

By Suddi9

Leave a Reply

Your email address will not be published. Required fields are marked *