ಬಂಟ್ವಾಳ; ಕ್ರೀಡೆಗೆ ಯಾವುದೇ ಜಾತಿ ಇಲ್ಲ, ರಾಜಕಾರಣಿಗಳೂ ಕೂಡ ಕ್ರೀಡಾ ಸ್ಪೂತರ್ಿಯನ್ನು ಮೈಗೂಡಿಸಿಕೊಂಡು ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು ಎಂದು ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಎಂ.ರಾಜೇಂದ್ರ ಕುಮಾರ್ ಹೇಳಿದ್ದಾರೆ. ಯುವ ಕಾಂಗ್ರೇಸ್ ಬಂಟ್ವಾಳ ವಿಧಾನಸಭಾ ಕ್ಷೇತ್ರ ಹಾಗೂ ಕಳ್ಳಿಗೆ ಗ್ರಾಮಾಭಿವೃದ್ಧಿ ಸಮಿತಿ ಆಶ್ರಯದಲ್ಲಿ ರಾಜ್ಯ ಅಮೆಚೂರು ಕಬಡ್ಡಿ ಅಸೋಶಿಯೇಶನ್ ಸಹಯೋಗದೊಂದಿಗೆ ಕಳ್ಳಿಗೆ ಮೈದಾನದಲ್ಲಿ ಶನಿವಾರ ಸಂಜೆ ಆರಂಭಗೊಂಡ ಎರಡುದಿನಗಳ ರಾಜ್ಯ ಮಟ್ಟದ ಪುರುಷರ(65 ಕೆ.ಜಿ.ವಿಭಾಗ) ಹಾಗೂ ಮಹಿಳೆಯರ (ಮುಕ್ತ) ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕ್ರೀಡಾಕೂಟಗಳಿಂದ ಯುವಕರನ್ನು ಹೆಚ್ಚು ಹೆಚ್ಚು ಆಕಷರ್ಿಸುವುದರೊಂದಿಗೆ, ಪಕ್ಷ ಸಂಘಟನೆಗೂ ಸಹಕಾರಿ ಎಂದ ಅವರು, ಕಳ್ಳಿಗೆ ಗ್ರಾಮದಲ್ಲಿ ಇದಕ್ಕೆ ಚಾಲನೆ ದೊರೆತಿದೆ, ಯುವಕರ ಅಭಿರುಚಿಗೆ ತಕ್ಕಂತೆ ಪಕ್ಷದ ನಾಯಕರು ನಡೆದುಕೊಂಡರೆ, ಮುಂದಿನ ದಿನಗಳಲ್ಲಿ ಪಕ್ಷ ಮತ್ತೆ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ,ಕ್ರೀಡಾಕೂಟದ ಗೌರವಾಧ್ಯಕ್ಷ ರಮಾನಾಥ ರೈ ಪಾರಿವಾಳವನ್ನು ಆಗಸಕ್ಕೆ ಹಾರಿಬಿಡುವ ಮೂಲಕ ಕಬ್ಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡುವ ದೃಷ್ಠಿಯಿಂದ ರಾಜ್ಯ ಅರಣ್ಯ ಇಲಾಖೆಯಡಿ ಕಬಡ್ಡಿ, ವಾಲಿಬಾಲ್ ಹಾಗೂ ಅತ್ಲೆಟಿಕ್ ತಂಡಗಳನ್ನು ರಚಿಸಲು ಉದ್ದೇಶಿಸಲಾಗಿದೆ, ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚಚರ್ಿಸಲಾಗಿದ್ದು, ಪ್ರಕ್ರಿಯೆ ಆರಂಭಗೊಂಡಿದೆ ಎಂದರು. ಸಂಕಷ್ಟದ ದಿನಗಳಲ್ಲೂ ದುರ್ಬಲದ ಪರವಾಗಿ ನಿಂತಂತಹ ಇತಿಹಾಸ ಕಾಂಗ್ರೇಸ್ ಪಕ್ಷಕ್ಕೆ ಇದೆ, ಸಮಾಜದಲ್ಲಿ ಸಮಾನತೆ, ಶಾಂತಿ, ಸೌಹಾರ್ದತೆ ನೆಲೆಸಿದಾಗ ಮಾತ್ರ ಬದುಕು ಸಾರ್ಥಕ್ಯವನ್ನು ಹೊಂದುತ್ತದೆ ಎಂದರು.
ರಾಜ್ಯ ಯುವಕಾಂಗ್ರೇಸ್ ಅಧ್ಯಕ್ಷ ಹರ್ಷದ್ ರಿಝ್ವಾನ್ ಮಾತನಾಡಿ, ಸಕರ್ಾರ ಶಿಕ್ಷಣ ದ ಜೊತೆಗೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು, ಎಲ್ಲಾ ಮೂಲಭೂತ ಸೌಕರ್ಯಗಳ ಜೊತೆಗೆ ಪ್ರತೀ ಊರಿಗೂ ಸುಸಜ್ಜಿತ ಕ್ರೀಡಾಂಗಣ ಒದಗಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಇದೇ ವೇಳೆ ಅಂತರಾಷ್ಟ್ರೀಯ ಕ್ರೀಡಾಪಟು ಕು.ಸುಪ್ರೀತಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಮನಪಾ ಮಹಾ ಪೌರ ಮಹಾಬಲ ಮಾರ್ಲ, ದ.ಕ.ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ರಮನಾಥ ರೈ ಪತ್ನಿ ಧನಭಾಗ್ಯ ರೈ, ಸಹೋದರಿ ಚೆನ್ನವೇಣಿ ಮೋಹನ್ದಾಸ್ ಶೆಟ್ಟಿ, ಸಹೋದರ ರಾಜಶೇಖರ ರೈ, ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಜಿ.ಪಂ.ಸದಸ್ಯರಾದ ಮಮತಾ ಗಟ್ಟಿ, ಎಂ.ಎಸ್.ಮಹಮ್ಮದ್, ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯ ಪ್ರಭಾ ಚಿಲ್ತಡ್ಕ, ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್.ಖಾದರ್, ಪ್ರಧಾನ ಕಾರ್ಯದಶರ್ಿ ಪಿಯುಸ್ ಎಲ್ ರೊಡ್ರಿಗಸ್, ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಸಿದ್ದಕಟ್ಟೆ ವಿಜಯ ಬ್ಯಾಂಕ್ ಪ್ರಬಂಧಕ ಬೇಬಿ ಕುಂದರ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್,ಧನಲಕ್ಷ್ಮೀ ಬಂಗೇರ, ಹೇಮಲತಾ, ಪದ್ಮನಾಭ ರೈ, ಬೆಂಗಳೂರಿನ ಉದ್ಯಮಿಗಳಾದ ಉದಯ ಹೆಗ್ಡೆ, ಚಾಮರಾಜ್, ರಾಜ್ಯ ಅಮೆಚೂರ್ ಕಬಡ್ಡಿ ಎಸೋಷಿಯೇಷನ್ನ ಕಾರ್ಯದಶರ್ಿ ಪುರುಷೋತ್ತಮ ಪೂಜಾರಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮನ್, ಪ್ರಮುಖರಾದ ನೇಮಿರಾಜ ಶೆಟ್ಟಿ, ಅಜೀಜ್ ಹೆಜಮಾಡಿ, ದೇವಿಕಿರಣ್, ಸದಾನಂದ ಶೆಟ್ಟಿ, ಭುವನೇಶ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ತಾ.ಪಂ.ಸದಸ್ಯ ಪದ್ಮಶೇಖರ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಕಳ್ಳಿಗೆ ಗ್ರಾಮ ಸಮಿತಿಯ ದಿವಾಕರ ಪಂಬದಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರ್ವಹಿಸಿದರು.
80 ತಂಡ ಭಾಗಿ..
ರಾಜ್ಯಮಟ್ಟದ ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧೆಡೆಯ 80 ಕಬಡ್ಡಿ ತಂಡಗಳು ಪಾಲ್ಗೊಂಡಿವೆ. ಚಿತ್ರದುರ್ಗ, ರಾಮನಗರ, ಮಂಡ್ಯ, ಬೆಳಗಾಂ, ಬೆಂಗಳೂರು, ಚಿಕ್ಕಮಗಳೂರು, ಕೊಡಗು ಹಾಗೂ ದಕ್ಷಿಣ ಕನ್ನಡ-ಉಡುಪಿ ಮೊದಲಾದ ಜಿಲ್ಲೆಗಳ ಪುರುಷ ಹಾಗೂ ಮಹಿಳೆಯರ ಪ್ರತಿಷ್ಠಿತ ತಂಡಗಳು ಭಾಗವಹಿಸುತ್ತಿದೆ.


