ಕೈಕಂಬ: ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವಂತೆ ಇತ್ತ ಗುರುಪುರ ,ಪೊಳಲಿಯಲ್ಲೂ ಚುನಾವಣೆಯ ಬಿಸಿ ಕಾವೇರುತ್ತಿದೆ. ಕಳೆದ ಒಂದು ವಾರಗಳ ಕಾಲದ ಬಹಿರಂಗ ಪ್ರಚಾರ, ಮನೆಮನೆಗೆ ಪ್ರಚಾರ ಇತ್ಯಾದಿ ಪ್ರಕ್ರಿಯೆಗಳು ಮುಗಿದ ಬಳಿಕ ಫೆ.7ರಂದು ಪೊಳಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಗುರುಪು ಸಹಕಾರಿ ಬ್ಯಾಂಕ್‍ನ ನಿರ್ದೇಶಕರ ಆಯ್ಕೆಗೆ ಭರ್ಜರಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ.

ಬಿಜೆಪಿ ಹಾಗು ಕಾಂಗ್ರೆಸ್ ಮಧ್ಯೆ ಈ ಹಣಾಹನಿ ನಡೆಯುತ್ತಿದೆ. ಸಾಮಾನ್ಯ , ಸಾಲಗಾರರಲ್ಲದೆ ಪರಿಷಿಷಠ ಜಾತಿ ಹಾಗೂ ಹಿಂದುಳಿದ ವರ್ಗ ಮಹಿಳೆ ಹೀಗೆ ಒಟ್ಟು ಹತ್ತು ಸ್ಥಾನಗಳಿಗೆ ಬೇರೆ ಬೇರೆ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಕಟ್ಟುನಿಟ್ಟಿನ ನೀತಿ ಸಂಹಿತ ಅಳವಡಿಸಲಾಗಿದೆ. ಮಾಮೂಲಿ ಓಟಿನಂತೆ ಭರ್ಜರಿಯಾಗಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ನೂರಾರು ಮಂದಿ ಸರತಿ ಸಾಲಿನಲ್ಲಿ ನಿಂತು ತನ್ನ ಹಕ್ಕನ್ನು ಚಲಾಯಿಸಿದರು. ಮತದಾನ ಪ್ರಕ್ರಿಯೆ ಗೌಪ್ಯವಾಗಿ ನಡೆಯುತ್ತಿದೆ.
ಪೊಳಲಿ ಸಹಕಾರಿ ಬ್ಯಾಂಕ್‍ನ ನಿರ್ದೇಶಕರ ಸ್ಥಾನಕ್ಕೆ ಪೊಳಲಿಯ ಆಯ್ದ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಪರಸ್ಪರ ಹತ್ತು ಹತ್ತು ಮಂದಿ ಸ್ಪರ್ಧಿಸಿದ್ದಾರೆ. ಪೊಲೀಸರು ಚುನಾವಣಾ ಕೇಂದ್ರದಲ್ಲಿ ಬೀಡುಬಿಟ್ಟಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪಹರೆ ಕಾಯುತ್ತಿದ್ದಾರೆ.
ಇಂದು ಸಂಜೆ ಮತ ಎಣಿಕೆ: ಇಂದು ಸಂಜೆಯೇ ಮತ ಎಣಿಕೆ ಕಾರ್ಯ ನಡೆಯಲಿದ್ದು, ಯಾರೆಲ್ಲಾ ಆಯ್ಕೆಗೊಳ್ಳಲಿದ್ದಾರೆಂಬ ಅಂಶ ಬಹಿರಂಗಗೊಳ್ಳಲಿದೆ.
ಪೊಳಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು: ಸಂಪತ್ ಕುಮಾರ್ ಅಮ್ಮುಂಜೆ, ಕರುಣಾಕರ ಆಳ್ವ ಅಮ್ಮುಂಜೆ, ದೇವ್‍ದಾಸ್ ಹೆಗ್ಡೆ, ವೆಂಕಟೇಶ್ ನಾವುಡ, ಯಶವಂತ ಪೂಜರಿ, ಗೋಪಾಲ ಅಂಚನ್, ನಿರಂಜನಿ ಸಿ ಶೆಟ್ಟಿ, ಅಬೂಬಕ್ಕರ್, ಜಯಂತಿ, ಹಾಗೂ ಲಿಂಗಪ್ಪ
ಚುನಾವಣೆಯ ಕಣದಲ್ಲಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು: ಚಂದ್ರಶೇಖರ ಭಂಡಾರಿ, ಚಂದ್ರಹಾಸ ಪಲ್ಲಿಪಾಡಿ, ಉಮೇಶ್ ಆಚಾರ್ಯ, ಕರಿಯಂಗಳ, ಸಾವಿತ್ರಿ ಮುಡಾಯಿಕೋಡಿ, ಹೊನ್ನಯ ಮುಂಡಾಲ, ಆನಂದ, ಮುಹಮ್ಮದ್ ಎಚ್. ಆಗ್ನೆಲ್ ಫೆರ್ನಾಂಡೀಸ್, ರಾಮ್ ಭಟ್, ಹಾಗೂ ರತ್ನ ಸ್ಪರ್ಧಿಸಿದ್ದಾರೆ.










