ಬಂಟ್ವಾಳ: ತಾಲೂಕಿನ ಅಮ್ಟೂರು ಗ್ರಾಮದ ಜನತೆ ಆರಾದಿಸಿಕೊಂಡು ಬರುತ್ತಿರುವ “ಗುಳಿಗೋಕ್ಕು ಗುಳಿಗ ಬನ ಮತ್ತು ಗುಳಿಗ ಕಟ್ಟೆ” ಇರುವ ಸ್ಥಳವನ್ನು ಮಾರಾಟ ಮಾಡುವುದಕ್ಕೆ ಆಕ್ಷೇಪ ಸಲ್ಲಿಸಿ ಅಮ್ಟೂರು ಯುವಕ ಮಂಡಲ ಹಾಗೂ ಅಮ್ಟೂರು ರಾಯಪ್ಪರಕೋಡಿ ಪರಿಸರದ ನಾಗರಿಕರ ನಿಯೋಗ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ.

guliga

ಸದ್ರಿ ಜಾಗದ ಸುತ್ತ ಮುತ್ತಲಿನ ಪರಿಸರದವರೆಲ್ಲರೂ ಸೇರಿಕೊಂಡು ಅನಾದಿ ಕಾಲದಿಂದಲೂ ಗುಳಿಗದೈವದ ಆರಾಧನೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಈ ಪರಿದರದವರೇ ಅಲ್ಲದ ಯಾರೋ ಮೂರನೇವ್ಯಕ್ತಿಗೆ ಸದ್ರಿ ಗುಳಿಗಬನ ಮತ್ತು ಗುಳಿಗ ಕಟ್ಟೆ ಇರುವ ಜಾಗವನ್ನು ಇತರ ಜಾಗಗಳೊಂದಿಗೆ ಮಾರಾಟ ಮಾಡುವ ಕ್ರಮವು ಸರಿಯಲ್ಲ.

ಸದ್ರಿ ಜಾಗವನ್ನು ಮಾರಾಟ ಮಾಡಿದರೆ ಹಿರಿಯರ ಕಾಲದಿಂದ ಆಚರಿಸಿಕೊಂಡು ಬಂದಿರುವ ಗುಳಿಗದೈವದ ಆರಾಧನೆಯನ್ನು ಮಾಡಿಕೊಂಡು ಬರಲು ಅನಾನುಕೂಲವಾಗುತ್ತದೆ. ಅದ್ದರಿಂದ ಈ ಜಾಗವನ್ನು ಮಾರಾಟ ಮಾಡುವುದಕ್ಕೆ ಅನುಮತಿ ನೀಡಬಾರದೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

By Suddi9

Leave a Reply

Your email address will not be published. Required fields are marked *