ಬಂಟ್ವಾಳ:ಕೇಂದ್ರದಲ್ಲಿ ಭ್ರಷ್ಟಾಚಾರ ನೆಪದಲ್ಲಿ ಪತನಗೊಂಡ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಬದಲಾಗಿ ಜನತೆಗೆ ಹೊಸ ‘ಹುಸಿ ಭರವಸೆ’ ಮೂಡಿಸಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರವು ಆಡಳಿತದಲ್ಲಿ ಎಂಟು ತಿಂಗಳು ಕಳೆದರೂ ದೇಶದ ಬಡವರು, ಕೃಷಿಕರು, ಕಾಮರ್ಿಕರಿಗೆ ಉದ್ಯೋಗ, ಆಹಾರ, ಆಥರ್ಿಕ ಭದ್ರತೆ ನೀಡದೆ ಕೇವಲ ಉದ್ಯಮಿಗಳು ಮತ್ತು ಕಾಪರ್ೊರೇಟ್ ಸಂಸ್ಥೆ ಮತ್ತಿತರ ಬಂಡವಾಳಶಾಹಿಗಳಿಗೆ ಮಾತ್ರ ‘ಅಚ್ಚೇದಿನ್’ ಒದಗಿಸಿ ಕೊಟ್ಟಿದೆ ಎಂದು ಕೇರಳ ಸಿಪಿಐ ಮುಖಂಡ, ರಾಜ್ಯಸಭಾ ಸದಸ್ಯ ಎಂ.ಪಿ.ಅಚ್ಚುತನ್ ಆರೋಪಿಸಿದ್ದಾರೆ.
3btl-MP Achuthan

3btl-CPI Procesion
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ವತಿಯಿಂದ ಮಂಗಳವಾರ ಏರ್ಪಡಿಸಿದ್ದ 22ನೇ ಜಿಲ್ಲಾ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಐಟಿಯುಸಿ ಜಿಲ್ಲಾ ಕಾರ್ಯದಶರ್ಿ ಎಚ್.ವಿ.ರಾವ್, ಜಿಲ್ಲಾಧ್ಯಕ್ಷ ವಿ.ಕುಕ್ಯಾನ್, ರೈತ ಮುಖಂಡ ಬಿ.ವಿಶ್ವನಾಥ ನಾಯಕ್, ಪ್ರಮುಖರಾದ ಕೆ.ವಿ.ಭಟ್, ಕೆ.ಈಶ್ವರ್, ವಸಂತಿ ಶೆಟ್ಟಿ, ಉಮಾವತಿ ಕುನರ್ಾಡು, ಸರಸ್ವತಿ ಕಡೆಶ್ವಾಲ್ಯ, ಬಾಬು ಭಂಡಾರಿ, ಪ್ರಭಾಕರ ರಾವ್ ಮತ್ತಿತರರು ಇದ್ದರು.
ಬಂಟ್ವಾಳ ಸಿಪಿಐ ಕಾರ್ಯದಶರ್ಿ ಬಿ.ಶೇಖರ್ ಸ್ವಾಗತಿಸಿ, ಸಹಕಾರ್ಯದಶರ್ಿ ಸುರೇಶ್ ಕುಮಾರ್ ವಂದಿಸಿದರು. ಜಿಲ್ಲಾ ಸಹಕಾರ್ಯದಶರ್ಿ ಸೀತಾರಾಮ ಬೇರಿಂಜ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್ಗೆ:
ಸಮ್ಮೇಳನದ ಆರಂಭದಲ್ಲಿ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಗೊಂಬೆ ಕುಣಿತ ಮತ್ತು ಬ್ಯಾಂಡು ವಾಲಗದೊಂದಿಆಕರ್ಷಕ ಮೆರವಣಿಗೆ.
ಮಾಜಿ ಶಾಸಕ ಡಾ.ಬಿ.ವಿ.ಕಕ್ಕಿಲ್ಲಾಯ ವೇದಿಕೆ, ಅಡ್ಡೂರು ಶಿವಶಂಕರ್ ರಾವ್ ಸಭಾಂಗಣ, ವಕೀಲ ಸತೀಶ್ ಕುಮಾರ್ ಬಂಟ್ವಾಳ ದ್ವಾರ, ಸಾಮೂಹಿಕ ಭೋಜನ, ಮಾಚರ್್ ತಿಂಗಳಿನಲ್ಲಿ ಬೆಳಗಾವಿ ಮತ್ತು ಪಾಂಡಿಚೇರಿಯಲ್ಲಿ ನಡೆಯುವ ಸಮ್ಮೇಳನಕ್ಕೆ ಆಹ್ವಾನ, ಬ್ಯಾನರ್ ಹರಿದ ಕಿಡಿಗೇಡಿಗಳಿಗೆ ಧಿಕ್ಕಾರ ಗಮನ ಸೆಳೆಯಿತು.

By suddi9

Leave a Reply

Your email address will not be published. Required fields are marked *