ಬಂಟ್ವಾಳ: ಕನರ್ಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇದರ ಆಶ್ರಯದಲ್ಲಿ, ಸಂಸಾರ ಜೋಡುಮಾರ್ಗ ಸಂಯೋಜನೆಯಲ್ಲಿ..ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು , ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಇವರ ಸಹಕಾರದೊಂದಿಗೆ ಬಂಟ್ವಾಳ ತಾಲೂಕು ಮಟ್ಟದ 2 ದಿನಗಳ ಮಕ್ಕಳ ಕಾವ್ಯ ಕಮ್ಮಟ ಫೆಬ್ರವರಿ 4 ಮತ್ತು 5 ರಂದು ಬಿ.ಸಿ..ರೋಡಿನ ಸಂಚಯಗಿರಿ ರಾಣಿಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ.
ತಾಲೂಕಿನ ವಿವಿಧ ಶಾಲೆಗಳ 35 ವಿದ್ಯಾಥರ್ಿಗಳು ಈ ಕಮ್ಮಟದಲ್ಲಿ ಭಾಗವಹಿಸಲಿದ್ದಾರೆ. ಕಮ್ಮಟದಲ್ಲಿ ಮೊದಲದಿನ ಮಕ್ಕಳ ಸಾಹಿತ್ಯ ಬೆಳೆದು ಬಂದ ದಾರಿ; ಮಕ್ಕಳ ಕವನದಲ್ಲಿನ ವೈವಿಧ್ಯತೆ ಬಗ್ಗೆ ಐಕೆ ಬೊಳುವಾರು, ಜನಪದ ಸಾಹಿತ್ಯ ಬೆಳೆದು ಬಂದ ದಾರಿ ಕುರಿತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಯಾನಂದ ಪೆರಾಜೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಶಿಬಿರಾಥರ್ಿಗಳಿಂದ ಮಾದರಿ ಕವಿತೆಗಳ ರಚನೆಯ ಚಟುವಟಿಕೆಯನ್ನು ಶಿಕ್ಷಕ ಭಾಸ್ಕರ ಅಡ್ವಳ ನಿರ್ವಹಿಸುವರು.
ಎರಡನೇ ದಿನ ಮಕ್ಕಳ ಕಥನ ಕವನಗಳು-ಶಿಶುಪ್ರಾಸದ ಕುರಿತಾಗಿ ಶಿಕ್ಷಕ ಜಯರಾಮಪಡ್ರೆ, ಮಕ್ಕಳ ಕಾವ್ಯದ ಲಯ ಮತ್ತು ಛಂದಸ್ಸಿನ ವೈವಿಧ್ಯತೆ ಕುರಿತಾಗಿ ಮಕ್ಕಳ ಲೋಕದ ಅಧ್ಯಕ್ಷ ಅನಂತಕೃಷ್ಣ ಹೆಬ್ಬಾರ್,ಪರಿಸರ ಮತ್ತು ಹಾಡು ಕುರಿತಾಗಿ ನಿವೃತ್ತ ಉಪನ್ಯಾಸಕ ರಾಜಮಣಿ ರಾಮಕುಂಜ ತರಗತಿ ನಡೆಸಿಕೊಡುವರು. ಇದೇ ಸಂದರ್ಭ ಕವಿಗೋಷ್ಠಿ ನಡೆಯಲಿದ್ದು, ಯುವಕವಿಗಳಾದ ವಿಷ್ಣುಗುಪ್ತ ಪುಣಚ, ಸೂರ್ಯನಾರಾಯಣ ಪೂವಳ, ಜಯಶ್ರೀ ಇಡ್ಕಿದು, ಶ್ರೀದೇವಿ ಕಂಟಿಕ , ಹರೀಶ್ ಮಂಜೊಟ್ಟಿ ಪೆರಾಜೆ, ಜಯಶ್ರೀ ಭಾಸ್ಕರ್ ಭಾಗವಹಿಸುವರು ಎಂದು ಸಂಸಾರ ತಂಡ ನಿದರ್ೇಶಕ ಮೌನೇಶ ವಿಶ್ವಕರ್ಮ ತಿಳಿಸಿದ್ದಾರೆ.
