ಬಂಟ್ವಾಳ: ಹೆಣ್ಣಕ್ಕಳ ಸುರಕ್ಷತೆಯ ಸಲುವಾಗಿ ಆರ್.ಎಂ.ಎಸ್. ( ರಾಷ್ಟ್ರೀಯ ಮಾದ್ಯಮಿಕ ಶಿಕ್ಷಣ ) ಇಲಾಖೆಯ ವತಿಯಿಂದ ಪ್ರೌಡ ಶಾಲಾ ವಿದ್ಯಾರ್ಥಿನಿಯರಿಗೆ ಹಮ್ಮಿಕೊಳ್ಳಲಾದ 2 ತಿಂಗಳ ಕರಾಟೆ ತರಬೇತಿಯನ್ನು ಕರಾಟೆ ಶಿಕ್ಷಕ ಆಶೋಕ ಅಚಾರ್ಯರವರು ನಡೆಸಿಕೊಟ್ಟರು. ತಾಲೂಕಿನ ನಾವೂರ, ಕಾವಳಕಟ್ಟೆ, ಕಾವಳಪಡೂರು ವಗ್ಗ, ಮಣಿನಾಲ್ಕೂರು, ಸರಪಾಡಿ ಪ್ರೌಡ ಶಾಲಾ ವಿದ್ಯಾರ್ಥಿನಿಯರಿಗೆ ತರಬೇತಿಯನ್ನು ನೀಡಲಾಯಿತು.

