ಸುದ್ದಿ9 ಮೂಡುಬಿದರೆ: ರಂಗಭಾರತಿ ಮಂಗಳೂರು ವತಿಯಿಂದ ಪಂಜಿಗುಡ್ಡೆ ನಾರಾಯಣ ಭಟ್ ಸಂಸ್ಮರಣ ಪನ್ನಾಭ ಪುರಸ್ಕಾರ ಪ್ರದಾನ ಹಾಗೂ ದಶಮಾನೋತ್ಸವ ಸಂಭ್ರಮ ಆಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಅನುಗ್ರಹ ಸಭಾಭವನದಲ್ಲಿ ರವಿವಾರ ಅಪರಾಹ್ನ ನಡೆಯಿತು.
ರಾಜ್ಯ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಅವರು ಕವಿ ವಿದ್ವಾನ್ ಬಂದಗದ್ದೆ ನಾಗರಾಜ ಅವರಿಗೆ ಪನ್ನಾಭ ಪುರಸ್ಕಾರ ಹಾಗೂ ಅಲಂಗಾರು ಬಡಗ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೆ.ಮೂ. ಈಶ್ವರ ಭಟ್ ಅವರಿಗೆ ಪನ್ನಾಭ ದಶಮಾನೋತ್ಸವ ವಿಶೇಷ ಪುರಸ್ಕಾರ ಪ್ರದಾನ ಮಾಡಿ ಶುಭ ಹಾರೈಸಿದರು.
ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಮಾತನಾಡಿ ಶಿಫಾರಸ್ಸಿಲ್ಲದೆ, ಅರ್ಹ ಸಾಧಕರನ್ನು ಗುರುತಿಸಿ ಗೌರವಿಸುವುದು ಶ್ರೇಷ್ಠ ಕೆಲಸ. ಸಮಾಜದ ಏಳಿಗೆಗಾಗಿ ಮಿಡಿಯುವ ಹಿರಿಯರನ್ನು ಪನ್ನಾಭ ಪುರಸ್ಕಾರದ ಮೂಲಕ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ಜಗದೀಶ್ ಅಧಿಕಾರಿ ಉಪಸ್ಥಿತರಿದ್ದರು.
ಕವಿ ಬಂಧಗದ್ದೆ ನಾಗರಾಜ – ವಸಂತ ಕುಮಾರಿ ಹಾಗೂ ದಂಪತಿ ಈಶ್ವರ ಭಟ್-ನಳಿನಿ ದಂಪತಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ರಂಗಭಾರತಿಯ ನಿರ್ದೇಶಕ ಕೆ.ವಿ.ರಮಣ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ಅಯನಾ.ವಿ.ರಮಣ್ ಹಾಗೂ ಮೋನಿಕಾ ರಾವ್ ಅವರಿಂದ ನೃತ್ಯ, ಸಂಸ್ಕ್ರತಿ ಮತ್ತು ಶಿಕ್ಷಣಗಳ ವಿಶಿಷ್ಟ ಸಮ್ಮಿಲನದ ನಾಟ್ಯಾಯನ ಕಾರ್ಯಕ್ರಮ ನಡೆಯಿತು.
ಮಹಾ ಕವಿ’ಯ ಬಲ್ಲಿರೇನಯ್ಯ?
ಪನ್ನಾಭ ದಶಮಾನೋತ್ಸವ ಪುರಸ್ಕಾರವನ್ನು ಪಡೆದ ಮೂಲತಃ ಉತ್ತರ ಕನ್ನಡದ ಬಂದಗದ್ದೆಯ ಕವಿ ನಾಗರಾಜರ ಬಗ್ಗೆ ಪರಿಚಯಾತ್ಮಕ ಮಾತುಗಳನ್ನಾಡಿದ ರಂಗ ಭಾರತಿಯ ಕೆ.ವಿ.ರಮಣ್ ,ಮಂಗಳೂರಿನ ಗಣಪತಿ ಹೈಸ್ಕೂಲ್‍ನಲ್ಲಿ ಅಧ್ಯಾಪಕರಾಗಿದ್ದ ಬಂದಗದ್ದೆಯವರು ಮಹಾಕಾವ್ಯಗಳ ರಚನೆಯ ಮೂಲಕ ಜನ ಮನ ಸೆಳೆದವರು. ವಿಶೇಷವಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಶಯನ ಗೀತೆಯಾಗಿ ಜನಪ್ರಿಯವಾಗಿರುವ ಯೇಸುದಾಸ್ ಹಾಡಿರುವ ”ಹರಿವರಾಸನಂ ವಿಶ್ವ ಮೋಹನಂ….’ ಹಾಡನ್ನು ಬರೆದವರೇ ಬಂದಗದ್ದೆಯವರು ಅವರಿಗೆ ‘ಮಹಾಕವಿ’ಎಂದು ಗೌರವಿಸಲು ಅಭಿಮಾನ ಪಡುತ್ತೇವೆ ಎಂದಾಗ ಸಭೆಯಲ್ಲಿ ಗಮನ ಸೆಳೆಯಿತು.
ಹತ್ತು ವರ್ಷಗಳ ಹಿಂದೆ ಮೊದಲ ಪನ್ನಾಭ ಪುರಸ್ಕಾರವನ್ನು ತನ್ನ ಮನೆಯಂಗಳದಲ್ಲೇ ಪಡೆದಿದ್ದ ಬಲಿಪ ನಾರಾಯಣ ಭಾಗವತರು ಇತ್ತ ಪನ್ನಾಭ ಪ್ರಶಸ್ತಿಯ ದಶಮಾನೋತ್ಸವ ಸಂಭ್ರಮದ ದಿನದಂದೇ ತನ್ನ 75 ವರ್ಷಗಳು ತುಂಬಿದ ಸವಿನೆನಪಿಗಾಗಿ ಕಲಾಭಿಮಾನಿಗಳಿಂದ ಅಮೃತ ಭವನ ಸಮರ್ಪಣೆಯನ್ನು ಪಡೆಯುತ್ತಿರುವುದೂ ಸಭೆಯಲ್ಲಿ ಪ್ರಸ್ತಾಪವಾಯಿತು.
Pannabha award

By suddi9

Leave a Reply

Your email address will not be published. Required fields are marked *