ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್-ಕೊಣಾಜೆ ರಸ್ತೆ ನಡುವಿನ ಸಜಿಪನಡು ಎಂಬಲ್ಲಿ ಕಳೆದ ತಿಂಗಳು ಜ.27ರಂದು ಕಾರೊಂದು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಸ್ಥಳೀಯ ಕಾಂತುಕೋಡಿ ನಿವಾಸಿ ಶ್ರೀನಿವಾಸ ಸಪಲ್ಯ (68) ಎಂದು ಗುರುತಿಸಲಾಗಿದ್ದು, ಅಂದು ಇವರು ಸಂಬಂಧಿಕರಿಗೆ ಗೃಹಪ್ರವೇಶದ ಆಮಂತ್ರಣ ನೀಡುವುದಕ್ಕಾಗಿ ಹೋಗುವ ವೇಳೆ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿತ್ತು ಎನ್ನಲಾಗಿದೆ.
ದೊರೆಯದ ಗೃಹಪ್ರವೇಶ ಭಾಗ್ಯ:
ಮೃತರು ಸಜೀಪನಡು ಸಮೀಪದ ಕಾಂತುಕೋಡಿ ಎಂಬಲ್ಲಿ ಹೊಸ ಮನೆ ನಿಮರ್ಿಸಿದ್ದು, ಅಪಘಾತದ ಹಿನ್ನೆಲೆಯಲ್ಲಿ ಗೃಹಪ್ರವೇಶ ಕಾರ್ಯಕ್ರಮವನ್ನು ಇದೇ ಫೆ.1ರ ಭಾನುವಾರಕ್ಕೆ ಮುಂದೂಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗೃಹಪ್ರವೇಶ ದಿನವೇ ಅವರು ಇಹ ಲೋಕ ತ್ಯಜಿಸಿರುವುದು ಹೊಸ ಮನೆಯಲ್ಲಿ ಸೂತಕದ ಛಾಯೆ ಆವರಿಸಲು ಕಾರಣವಾಗಿದೆ. ಮೃತರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
