ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೆ.ಸಿ.ರೋಡ್ ಎಂಬಲ್ಲಿ ಮುಸ್ಲಿಂ ಸ್ನೇಹಿತೆ ಮಗು ನೋಡಲು ಕುಂದಾಪುರದಿಂದ ಬಂದಿದ್ದ ಹಿಂದೂ ಯುವತಿ ಅನ್ಯ ಧಮರ್ೀಯ ವ್ಯಕ್ತಿ ಕಾರಿನಲ್ಲಿ ಪ್ರಯಾಣಿಸುವ ಮೂಲಕ ಸ್ಥಳೀಯರಲ್ಲಿ ಕೆಲಹೊತ್ತು ಗೊಂದಲ ಮೂಡಿಸಿದ ಘಟನೆ ಭಾನುವಾರ ನಡೆದಿದೆ.
ಕಲ್ಲಡ್ಕ ಪೇಟೆಯಲ್ಲಿ ಭಾನುವಾರ ಮಧ್ಯಾಹ್ನ ಮಂಗಳೂರು ಕಡೆಯಿಂದ ಬಸ್ಸಿನಲ್ಲಿ ಬಂದಿದ್ದ ಹಿಂದೂ ಯುವತಿ ರಸ್ತೆ ಬದಿ ಸಂಶಯಾಸ್ಪದ ರೀತಿಯಲ್ಲಿ ನಿಂತು ಮೊಬೈಲ್ನಲ್ಲಿ ಮಾತನಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಇದೇ ವೇಳೆ ಅಲ್ಲಿಗೆ ಬಂದ ಮುಸ್ಲಿಂ ವ್ಯಕ್ತಿಯ ಕಾರಿನಲ್ಲಿ ಈಕೆ ಕುಳಿತು ಕೆ.ಸಿ.ರೋಡ್ನಲ್ಲಿರುವ ಆತನ ಮನೆಗೆ ಹೋಗಿದ್ದಾರೆ.
ಇದನ್ನು ಗಮನಿಸಿದ ಕೆಲವು ಮಂದಿ ಯುವಕರು ಕಾರನ್ನು ಹಿಂಬಾಲಿಸಿ, ಆಕೆ ಹೊಕ್ಕಿದ್ದ ಅನ್ಯಮತೀಯ ವ್ಯಕ್ತಿಯ ಮನೆಯ ಸುತ್ತಮುತ್ತ ಜಮಾಯಿಸತೊಡಗಿದ್ದರು. ಇದರಿಂದಾಗಿ ಕೆಲಹೊತ್ತು ಸ್ಥಳೀಯರಲ್ಲಿ ಆತಂಕ ಮತ್ತು ಗೊಂದಲ ಮೂಡಿಸಿ ಉದ್ವಿಗ್ನತೆಗೆ ಕಾರಣವಾಗಿತ್ತು.
ತಕ್ಷಣವೇ ಬಂಟ್ವಾಳ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ಅಪರಾಧ ಪತ್ತೆ ವಿಭಾಗದ ಎಸ್.ಐ ಚಂದ್ರಶೇಖರಯ್ಯ ಮತ್ತಿತರ ಪೊಲೀಸರು ಧಾವಿಸಿ ಗುಂಪನ್ನು ಚದುರಿಸಿ, ಯುವತಿಯನ್ನು ವಿಚಾರಿಸಿದ್ದಾರೆ.
ಈ ಹಿಂದೆ ಈಕೆ ಮಂಗಳೂರಿನ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಇಲ್ಲಿನ ಮುಸ್ಲಿಂ ಯುವತಿ ಇತ್ತೀಚೆಗೆ ಹೆರಿಗೆಯಾಗಿದ್ದು, ಆಕೆಯ ಮಗುವನ್ನು ನೋಡಲು ಕುಂದಾಪುರದಿಂದ ಬಸ್ಸಿನಲ್ಲಿ ಬಂದು ಬಳಿಕ ಕಲ್ಲಡ್ಕದಿಂದ ಬಾಣಂತಿ ಪತಿ ಕಾರಿನಲ್ಲಿ ಬಂದಿರುವುದನ್ನು ಒಪ್ಪಿಕೊಂಡಿದ್ದಾಳೆ. ಆ ಬಳಿಕ ಆಕೆಯ ಹೆತ್ತವರನ್ನು ಸಂಪಕರ್ಿಸಿ ಮನೆಗೆ ತಲುಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
