ಕೈಕಂಬ: ಕಾಸರಗೋಡುವಿನಿಂದ ಆರಂಭಿಸಿ ಕಾರವಾರದವರೆಗಿನ ಯಕ್ಷಗಾನದ ವ್ಯಾಪ್ತಿಯಿದೆ. ಇಷ್ಟು ಸಣ್ಣ ಪ್ರದೇಶದಲ್ಲಿ ಇಂದು 10 ಸಾವಿರಕ್ಕಿಂತಲೂ ಅಧಿಕ ಯಕ್ಷಗಾನ ಕಲಾವಿದರಿರುವುದು ಹೆಮ್ಮೆಯ ವಿಷಯ. ಯಕ್ಷಗಾನದಿಂದ ಭಾವಶುದ್ಧಿ ಹಾಗೂ ಆತ್ಮ ಶುದ್ಧಿಯಾಗುತ್ತದೆ ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ಶ್ರೀ ಹರಿನಾರಾಯಣ ದಾಸ ಆಸ್ರಣ್ಣ ಅವರು ಹೇಳಿದರು.
ಅವರು ಫೆ.1ರಂದು ನಡೆದ ಬಡಗಬೆಳ್ಳೂರು ಗ್ರಾಮದ ವರಕೋಡಿ ಯಕ್ಷಗಾನ ಸಂಘದ ದಶಮಾನೋತ್ಸವ ಸಮಾರಂಭದಲ್ಲಿ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಯಕ್ಷಗಾನದಲ್ಲಿ ಸಂಗೀತ ಶಾಸ್ತ್ರ, ನಾಟ್ಯ ಶಾಸ್ತ್ರ ಇರುವುದರಿಂದ ಇಷ್ಟೆಲಾ ಜನಪ್ರಿಯತೆ ಪಡೆಯಲು ಸಾಧ್ಯವಾಗಿದೆ. ಜೊತೆಗೆ ಒಳ್ಳೆಯ ಸಾಹಿತ್ಯ ಪ್ರೇಕ್ಷಕರಿಗೆ ಭಕ್ತಿ, ಸಂಸ್ಕಾರ ನೀಡುತ್ತದೆ. ಶಾಸ್ತ್ರೀಯವಾದ ಭಾಷೆಮ ಹಾಡು ಮುಂತಾದುವುಗಳಿರುವದರಿಂದ ಪ್ರೇಕ್ಷಕರಿಗೆ ಸಾತ್ವಿಕ ಮನೋರಂಜನೆ ನೀಡುತ್ತದೆ ಎಂದು ಹರಿನಾರಾಯಣ ಅಸ್ರಣ್ಣ ಅಭಿಪ್ರಾಯಪಟ್ಟರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತಾಡುತ್ತಿದ್ದ ಕಾವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಘು ಎಲ್ ಶೆಟ್ಟಿ ಮಾತಾಡಿ, ಸಂಘಸಂಸ್ಥೆಗಳು ಕೇವಲ ಮನೋರಂಜನೆಯ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ಮಾಡದೆ ನಾನಾರಂಗದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿದಾಗ ಮಾತ್ರ ಕಾರ್ಯಕ್ರಮಕ್ಕೆ ಬಲ ಬರುತ್ತದೆ. ಸಂಘಸಂಸ್ಥೆಯ ಸದಸ್ಯರು ತಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಕೆಲಸ ನಿರ್ವಹಿಸಿದರೆ ಯಾವುದೇ ಕಾರ್ಯಕ್ರಮದಲ್ಲೂ ಯಶಸ್ಸು ಸಾಧ್ಯ ಎಂದು ಅವರು ನುಡಿದರು. ಈ ವೇಳೆ ಸಂಘಕ್ಕೆ ತನ್ನ ವತಿಯಿಂದ ಆಸನದ ವ್ಯವಸ್ಥೆ ಮಾಡಿಕೊಡುವುದಾಗಿ ಅವರು ಘೋಷಿಸಿದರು.
ಕಾರ್ಯಕ್ರಮದಲ್ಲಿ ನಿವೃತ ಶಿಕ್ಷಕಿಯರಾದ ಕಮಾಲಾಕ್ಷಿ ಭಟ್, ಎವ್ಜಿನ್ ಕುವೆಲ್ಲೊ, ಪ್ರಸಿದ್ದ ಯುವ ಭಾಗವತರಾದ ಸತೀಶ್ ಶೆಟ್ಟಿ ಪಟ್ಲ ಹಾಗೂ ರವಿಚಂದ್ರ ಕನ್ನಡಿಕಟ್ಟೆ ಹಾಗೂ ಕಲಾವಿದರಾದ ಮಾಧವ ಕೊಳತ್ತಮಜಲು, ಮೋಹನ್ ಅಮ್ಮುಂಜೆ, ಸುದರ್ಶನ ಶೆಟ್ಟಿ, ಬಿ.ನಾರಾಯಣ, ರಂಗಕರ್ಮಿ ಗಿಲ್ಬರ್ಟ್ ಡಿ”ಸೋಜ ಮತ್ತು ನಾಟಿ ವೈದ್ಯರಾದ ಈಶ್ವರ ಪೂಜಾರಿ ಕಲಾಯಿ ಮುಂತಾದವರನ್ನು ಸನ್ಮಾನಿಸಲಾಯಿತು.
ಅರಣ್ಯ ಸಚಿವ ರಮಾನಾಥ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ವೇದಿಕೆಯಲ್ಲಿ ಭದ್ರಕಾಳಿ ದೇವಸ್ಥಾನದ ಮೊಕ್ತೇಸರ ರಮೇಶ್, ಹಿರಿಯ ಕ್ರಷಿಕ ಮಹಬಲ ಶೆಟ್ಟಿ ವರಕೋಡಿ, ಉದ್ಯಮಿ ಉಮೇಶ ಬೆಂಜನಪದವು, ಮಾಡ್ಲಾಯ ದ್ಯೆವದ ಪಾತ್ರಿ ಚಂದ್ರಶೇಖರ ಅಜಿಲ, ಬೆಳ್ಳೂರು ರಘುರಾಮ ಭಟ್, ಮಹಬಲ ಆಳ್ವ, ಗಂಗಾಧರ ರೈ, ಯಕ್ಷಕಲಾ ಸಂಘದ ಅಧ್ಯಕ್ಷ ಪ್ರದೀಪ್ ಮಜ್ಜಿಬೈಲ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಡಗಬೆಳ್ಳೂರು ಅನುದಾನಿತ ಹಿ. ಪ್ರಾಥಮಿಕ ಶಾಲಾ ಇದರ 2013-14ನೇ ಶಾಲಿನ 1 ನೇ ತರಗತಿಯಿಂದ 7 ನೇತರಗತಿಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಯಕ್ಷಕಲಾ ಸಂಘ ವರಕೋಡಿ ಅರ್ಕುಳ ದೇವ್ದಾಸ್ ಅವರಿಂದ ಯಕ್ಷಗಾನ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ದಿನೇಶ್ ಸ್ವಾಗತಿಸಿ ಟಿ. ಆರ್ ನಗೇಶ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಿನ್ನಿಕಂಬಳ ವಾದಿರಾಯ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ರೆಂಜಾಳ ಧನ್ಯವಾದವಿತ್ತರು.

















