ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ಬಂಟ್ವಾಳ ತಾಲೂಕು ಉಳಿ ಗ್ರಾಮ ಕಕ್ಯಪದವು ಮೈರಾ ಶ್ರೀ ರಾಮಾಂಜನೇಯ ಗೆಳೆಯರ ಬಳಗ ಇದರ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಮಾಂಜನೇಯ ಭಜನ ಮಂದಿರಕ್ಕೆ ಸಹಾಯಧನವಾಗಿ 50 ಸಾವಿರ ರೂ. ಬಿಡುಗಡೆಗೊಂಡಿದ್ದು ಅದರ ಮೊದಲನೆ ಕಂತು 30 ಸಾ.ರೂ. ಮೊತ್ತದ ಡಿ.ಡಿ.ಯನ್ನು ಬಂಟ್ವಾಳ ಯೋಜನಾ ಕಛೇರಿಯಲ್ಲಿ ಯೋಜನಾಕಾರಿ ಸುನೀತಾ ನಾಯಕ್ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ , ನ್ಯಾಯವಾದಿ ರಂಜಿತ್ ಮೈರಾ, ಕಾರ್ಯದರ್ಶಿ ವಸಂತ ಗೌಡ ಮಾಮಾಯಿ, ಉಳಿ ಗ್ರಾಮದ ಎ ಒಕ್ಕೂಟದ ಅಧ್ಯಕ್ಷ ಶೇಖರ ಕಂಚಳಪಲ್ಕೆ ಉಪಸ್ಥಿತರಿದ್ದರು.
–

