ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ವರಕೋಡಿ ಯಕ್ಷಕಲಾ ಸಂಘದ ದಶಮಾನೋತ್ಸವ ಸಂಆರಂಭವು ಫ್ರೆ.1 ರಂದು ಭಾನುವಾರದಿಂದ ಫ್ರೆ.2 ರ ಸೋಮವಾರದವರೆಗೆ ಯಕ್ಷ ಕಲಾ ಸಂಘ ವರಕೋಡಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಭಾನುವಾರ ಬೆಳಗ್ಗೆ ಗಣಹೋಮ, ಸಾರ್ವಜನಿಕ ಸತ್ಯನಾರಾಯಣ ಪೂಜೆ,ಬೆಳಗ್ಗೆ 10 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಅನುದಾನಿತ ಹಿ. ಪ್ರಾಥಮಿಕ ಶಾಲೆ ಬಡಗಬೆಳ್ಳೂರು ಇದರ 2013-14ನೇ ಶಾಲಿನ 1 ನೇ ತರಗತಿಯಿಂದ 7 ನೇತರಗತಿಯಲ್ಲಿ ಪ್ರಥಮ ಮತ್ತು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ವಿವಿಧ ಸಾದಕರಿಗೆ ಕಲಾವಿದರಿಗೆ, ಶಿಕ್ಷಕರಿಗೆ, ನಾಟಿ ವೈದೈರಿಗೆ, ಕಲಾ ಪೋಷಕರಿಗೆ ಸನ್ಮಾನ ಕಾರ್ಯಕ್ರಮ ನಂತರ ಮಧ್ಯಾಹ್ನ 12 ಗಂಟೆಯಿಂದ ಶ್ರೀ ದೇವದಾಸ ಅರ್ಕುಳ ಇವರಿಂದ ತರಬೇತಿ ಪಡೆದ ಮಕ್ಕಳಿಂದ ಯಕ್ಷಗಾನ ಬಯಲಾಟ “ವೀರಮಣಿ ಕಾಳಗ-ಲವಕುಶ ” ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ರಾತ್ರಿ 8.30ಕ್ಕೆ ಮಹಾಪೂಜೆ ಸಾರ್ವಜನಿಕ ಅನ್ನ ಸಂತರ್ಪಣೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆಯಕ್ಷಗಾನ ಬಯಲಾಟ ನಡೆಯಲಿದೆ.
ಫ್ರೆ. 2ರಂದು ಸೋಮವಾರ ರಾತ್ರಿ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ರಾತ್ರಿ ಗಂಟೆ 9.30ಕ್ಕೆ ಶ್ರೀ ಭಗವತಿ ಮೇಳ ಸಸಿಹಿತ್ಲು ಇವರಿಂದ ಶ್ರೀ ಬೆಂಜನಪದವು ಕ್ಷೇತ್ರ ಮಹಾತ್ಮೆ-ವಾವರ ಮೋಕ್ಷ ಎಂಬ ಯಕ್ಷಗಾನ ಬಯಲಾಟವಾಗಿ ಆಡಿತೋರಿಸಲಿದ್ದಾರೆ ಎಂದು ಯಕ್ಷಕಾಲಾ ಸಂಘ ವರಕೋಡಿ ಇದರ ಪ್ರಕಟನೆ ತಿಳಿಸಿದೆ.
