ಸುಳ್ಯ : ಸಂಪಾಜೆ ಗ್ರಾಮದ ಅರೆಕಲ್ಲು ರಸ್ತೆ ಬಳಿ ಮೂರು ಜಾನುವಾರುಗಳನ್ನು ಸಾಗಿಸುತ್ತಿದ್ದ ಬದಿಯಡ್ಕದ ಮಹ್ಮದ್ ಶರೀಫ್ ಮತ್ತು ಜಾರ್ಜ್ ಎಂಬವರನ್ನು ತಡೆಗಟ್ಟಿದ ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಅರೆಬೆತ್ತಲೆಗೊಳಿಸಿ ಹಲ್ಲೆಗೈದ ಘಟನೆ ನಡೆದಿದೆ.

dana

3 ಸಾವಿರ ರೂಪಾಯಿಗೆ ಜಾನುವಾರು ಮಾರಿದ ಸುಧಾಕರ ಎಂಬಾತನೇ ದುಷ್ಕರ್ಮಿಗಳಿಗೆ ಮಾಹಿತಿ ನೀಡಿದ್ದನೆಂದು ಹೇಳಲಾಗಿದೆ.
ಶರೀಫ್ ಮತ್ತು ಜಾರ್ಜ್ ಓಮ್ನಿ ವಾಹನದಲ್ಲಿ ದನ ಸಾಗಿಸುತ್ತಿದ್ದಾಗ ತನ್ನ ದನ ಕಳ್ಳತನವಾಗಿದೆ ಎಂದು ಸ್ಥಳೀಯ ಯುವಕರಿಗೆ ಸುಧಾಕರ ಸುಳ್ಳು ಮಾಹಿತಿ ನೀಡಿದ್ದ. ತಕ್ಷಣ 8 ಮಂದಿ ಅಡ್ಡಗಟ್ಟಿ, ಹಲ್ಲೆಗೈದಿದ್ದಾರೆ. ನಂತರ ಪೊಲೀಸರು ಎರಡು ಕಡೆಯವರನ್ನು ವಶಕ್ಕೆ ಪಡೆದು ಅಕ್ರಮ ಗೋಸಾಗಾಟ ಹಲ್ಲೆ ಪ್ರಕರಣದ ವಿರುದ್ಧ ಕೇಸು ದಾಖಲಿಸಿದ್ದಾರೆ.

By Suddi9

Leave a Reply

Your email address will not be published. Required fields are marked *