ಸುಳ್ಯ: ಮದುವೆ ಎಂಬುದು ಋಣಾನುಬಂಧ ಎಂಬ ನಂಬಿಕೆ ಭಾರತೀಯರದ್ದು. ಪ್ರಕೃತಿಯನ್ನು ಸಾಕ್ಷೀಕರಿಸಿ ನಡೆಯುವ ಇಲ್ಲಿನ ವಿವಾಹ ಪದ್ಧತಿ ವಿದೇಶಿಯರನ್ನೂ ಆಕರ್ಷಿಸಿದೆ. ವಿದೇಶಿ ಜೋಡಿಯ ಇಂತಹ ಅಪರೂ ಪದ ವಿವಾಹಕ್ಕೆ ಸುಳ್ಯದ ಸ್ನೇಹ ಶಾಲೆ ಸಾಕ್ಷಿಯಾಯಿತು.

ವರ್ಷದ ಹಿಂದೆ ಸ್ನೇಹ ಶಾಲೆಗೆ ಗೌರವ ಶಿಕ್ಷಕಿಯಾಗಿ ಆಗಮಿಸಿದ್ದ ಸ್ವೀಡನ್‍ನ ಸಿಸಿಲಿಯಾ ಗೋವಾಕ್ಕೆ ಹೋಗಿದ್ದಾಗ ಅಲ್ಲಿಗೆ ಆಗಮಿಸಿದ್ದ ಇಂಗ್ಲೆಂಡ್‍ನ ಗ್ಯಾರಿಯ ಪರಿಚಯ ಮಾಡಿಕೊಂಡಿದ್ದರು. ಅವರ ಪರಿಚಯ ಪ್ರೇಮವಾಗಿ ಬೆಳೆದು ವಿವಾಹದವರೆಗೂ ಮುಂದುವರಿಯಿತು. ತನಗೆ ಭಾರ ತೀಯ ವೈದಿಕ ಪರಂಪರೆಯಂತೆ ವಿವಾಹ ಆಗುವ ಆಸೆ ಎಂದು ಆಕೆ ತನ್ನ ಪ್ರಿಯತಮ ಗ್ಯಾರಿಗೆ ತಿಳಿಸಿದಾಗ ಆತನೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದ. ತಮ್ಮ ಅಪೇಕ್ಷೆಯನ್ನು ಸ್ನೇಹ ಶಾಲಾ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಅವರ ಮುಂದಿಟ್ಟಿದ್ದು, ಅವರೂ ಪೂರಕವಾಗಿ ಸ್ಪಂದಿಸಿದರು.
ಪ್ರತಿ ವರ್ಷ ಜನವರಿ ತಿಂಗಳ 2ನೇ ಭಾನುವಾರ ಸ್ನೇಹ ಶಾಲಾ ಹಳೆ ವಿದ್ಯಾ ರ್ಥಿಗಳ ಸಮ್ಮಿಲನ ಕಾರ್ಯಕ್ರಮ ಶಾಲೆ ಯಲ್ಲಿ ನಡೆಯುತ್ತದೆ. ಈ ಬಾರಿ ಭಾನು ವಾರ ಸುಳ್ಯ ಚೆನ್ನಕೇಶವ ರಥೋತ್ಸವ. ಬೆಳಿಗ್ಗೆ 11-14ರ ಕುಂಭ ಲಗ್ನದಲ್ಲಿ ವಿವಾಹ ನಡೆಸುವುದೆಂದು ಮುಹೂ ರ್ತವೂ ನಿರ್ಧಾರವಾಯಿತು. ಇದಕ್ಕೆ ವಧೂವರರ ಮನೆಯವರ ಒಪ್ಪಿಗೆಯೂ ಸಿಕ್ಕಿತು.
ವರನ ದಿಬ್ಬಣದ ಆಗಮನ, ಸಾಂಪ್ರದಾಯಿಕ ಸ್ವಾಗತ, ವರೋಪ ಚಾರ, ಹೂವಿನ ಹಾರ ಬದಲಿಸುವುದು, ಧಾರಾಕಾರ್ಯ, ಮಂಗಲಸೂತ್ರ ಧಾರಣೆ, ಸಪ್ತಪದಿ, ಲಾಚ ಹೋಮ, ಕಾಲುಂಗುರ ಧಾರಣೆ, ಹಿರಿಯರ ಆಶೀ ರ್ವಾದ ಸೇರಿದಂತೆ ವೈದಿಕ ಸಂಪ್ರದಾಯ ಪ್ರಕಾರ ಸಿಸಿಲಿಯಾ-ಗ್ಯಾರಿ ದಂಪತಿ ಯಾದರು.
