ಬಂಟ್ವಾಳ , ಜ. 24: ಯೋಗ ಅಧ್ಯಯನ ಮಾಡಲು ಒಂದು ಜೀವನ ಸಾಲದು, ಅದು ತುಂಬಾ ಅಗಾಧವಾದದ್ದು. ಯೋಗ ಅಭ್ಯಾಸದಿಂದ ಉದ್ಯೊಗಕ್ಷೇತ್ರದಲ್ಲೂ ಕೂಡ ವಿಪುಲವಾದ ಅವಕಾಶವಿದೆ, ಎಂದು ಎಕ್ಕೂರಿನ ಯೋಗ ಶಿಕ್ಷಕ ಹಾಗೂ ಚಿಕಿತ್ಸಕ ಶ್ರೀಕಾಂತ್ ಎಸ್.ವಿ. ಹೇಳಿದರು.ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಹಾಗೂ ಯೋಗವಿಜ್ಞಾನ ವಿಭಾಗದ ಆಶ್ರಯದಲ್ಲಿ ಶ್ರೀ ರಾಮ ಪ್ರಥಮ ದಜರ್ೆ ಕಾಲೇಜು ಕಲ್ಲಡ್ಕದಲ್ಲಿ ನಡೆದ ಪ್ರಚಾರೋಪನ್ಯಾಸದಲ್ಲಿ ಯೋಗದಿಂದ ಕೌಶಲ್ಯದ ಬೆಳವಣಿಗೆ ಎಂಬ ವಿಷಯದ ಕುರಿತು ಮಾತನಾಡಿದರು.
DSC06408

DSC06413
ಯೋಗದಲ್ಲಿ ಸತತ ಅಭ್ಯಾಸನಿರತರಾಗಿ ಕೌಶಲ್ಯಭರಿತವಾದರೆ ಅದರಿಂದ ಪರಿಣತಿಯನ್ನು ಪಡೆದು, ಶ್ರೇಷ್ಠತೆಯನ್ನು ಸಾಧಿಸಬಹುದು. ವ್ಯಕ್ತಿ ಶ್ರೇಷ್ಠನಾದಾಗ ಸಮಾಜ ತನ್ನಿಂದ ತಾನೇ ಶ್ರೇಷ್ಟವಾಗುತ್ತದೆ ಎಂದರು.
ಯೋಗಕ್ಕೆ ಶಾಸ್ತ್ರೀಯ ನೆಲೆಯಲ್ಲಿ ಸ್ಥಾನಮಾನ ದೊರಕಿಸಿಕೊಟ್ಟ ನಾಡು ಭಾರತ. ಆದರೆ ಇಂದು ಅದರ ಆಸಕ್ತಿಗೆ ಒಳಗಾಗುತ್ತಿರುವವರು ಪಾಶ್ಚಿಮಾತ್ಯರು. ಅದರ ಪ್ರಭಾವ ಬೀರುತ್ತಿರುವುದು ಭಾರತೀಯರ ಮೇಲೆ ಇದು ವಿಪಯರ್ಾಸದ ಸಂಗತಿ ಎಂದರು.
ಯಾವುದೇ ವಿದ್ಯೆ ಸಾಧಕನ ಸೊತ್ತು ಆಗಿರುತ್ತದೆ ಅದು ಸೋಮಾರಿಗಳ ಸೊತ್ತಲ್ಲ. ಆದ್ದರಿಂದ ಯೋಗವನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡಬೇಕು. ಯೋಗದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದರಿಂದ ಕೌಶಲ್ಯಭರಿತವಾದ ಜೀವನಶೈಲಿ ನಮ್ಮದಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಾಯಾಜಿ ವಹಿಸಿದ್ದರು, ಡಾ ತಿರುಮಲೇಶ್ವರ ಪ್ರಸಾದ್, ಮಂಗಳೂರು ವಿಶ್ವವಿದ್ಯಾನಿಲಯದ ಧರ್ಮನಿಧಿ ಯೋಗಪೀಠದ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾಥರ್ಿ ಶಿವಪ್ರಸಾದ ಸ್ವಾಗತಿಸಿ, ಅಕ್ಷತಾ ವಂದಿಸಿ, ಸೌಜನ್ಯ ಕಾರ್ಯಕ್ರಮ ನಿರ್ವಹಿಸಜದರು.

By Suddi9

Leave a Reply

Your email address will not be published. Required fields are marked *