ಸುದ್ದಿ9 ಬಂಟ್ವಾಳ : ಉಳ್ಳಾಲದ ಅಬ್ಬಕ್ಕ ರಾಣಿ ಪೋರ್ಚುಗೀಸರೊಂದಿಗೆ ಮಾಡಿದ ಸ್ವಾತಂತ್ರ್ಯದ ಸೆಣಸಾಟ ಇಂದಿನ ಯುವ ಜನತೆಯಲ್ಲಿ ಸಾಹಸದ ಸ್ಪೂರ್ತಿಯಾಗಿದೆ. ಅಬ್ಬಕ್ಕ ಉತ್ಸವದ ಅಂಗವಾಗಿ ನಡೆಯುವ ವಿವಿಧ ಕ್ರೀಡೆ ಮತ್ತು ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಷ್ಟ್ರೀಯ ಜಾಗೃತಿಗೆ ಕಾರಣರಾಗಬೇಕು ಎಂದು ಹಿರಿಯ ನಾಟಕಕಾರ ಮತ್ತು ಸಿನಿಮಾ ನಿರ್ಮಾಪಕ ಡಾ.ಸಂಜೀವ ದಂಡಕೇರಿ ಹೇಳಿದರು .
ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲ ಇವರ ಆಶ್ರಯದಲ್ಲಿ ಜನವರಿ 24 ಮತ್ತು 25 ರಂದು ಜರಗಲಿರುವ ವೀರರಾಣಿ ಅಬ್ಬಕ್ಕ ಉತ್ಸವಕ್ಕೆ ಪೂರ್ವಭಾವಿಯಾಗಿ ಭಾನುವಾರ ತುಂಬೆ ಬಿ.ಎ.ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜರಗಿದ ” ರಾಣಿ ಅಬ್ಬಕ್ಕ ಕ್ರೀಡೋತ್ಸವ-2015 ” ಕ್ರೀಡಾ ಮತ್ತು ಸಾಂಸ್ಕ್ರತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು . ” ತುಳುನಾಡಿನಲ್ಲಿ ಅಬ್ಬಕ್ಕ ಚರಿತ್ರೆ ಕೇವಲ ನಾಟಕಗಳಿಗೆ ಸೀಮಿತವಾಗಿದೆ .ಅದು ದೇಶದ ಸ್ವಾತಂತ್ರ್ಯ ಇತಿಹಾಸದ ಒಂದು ಭಾಗವಾಗಬೇಕು. ಎಂದು ಅವರು ಹೇಳಿದರು .
ಡಾ.ಸಂಜೀವ ದಂಡಕೇರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು . ಅದಕ್ಕೂ ಮುನ್ನ ಅಂತರಾಷ್ಟ್ರೀಯ ಕ್ರೀಡಾಪಟು ಕು.ಸುಪ್ರೀತಾ ಪೂಜಾರಿ ಗುಡ್ಡಗಾಡು ಓಟಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಆಟೋಟ ಸ್ಪರ್ಧೆಗಳನ್ನು ಉದ್ಘಾಟಿಸಿದರು . ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು .
ಜಿ.ಪಂ.ಸದಸ್ಯೆ ಮಮತಾ ಡಿ ಎಸ್ ಗಟ್ಟಿ , ತಾ.ಪಂ.ಸದಸ್ಯರಾದ ಆನಂದ ಶಂಭೂರು , ಶರೀಫ್ , ಪುಷ್ಪಾವತಿ . ಆಸೀಫ್ ಇಕ್ಬಾಲ್ , ನರಿಕೊಂಬು ಗ್ರಾ.ಪಂ.ಅಧ್ಯಕ್ಷೆ ಸುಮತಿ , ಸಜಿಪಮುನ್ನೂರು ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ , ಸಜಿಪಮೂಡ ಗ್ರಾ.ಪಂ.ಅಧ್ಯಕ್ಷೆ ಸುಂದರಿ , ಸಜಿಪನಡು ಗ್ರಾ.ಪಂ.ಅಧ್ಯಕ್ಷೆ ಮೈಮುನಾ , ಪುದು ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ , ತುಂಬೆ ಗ್ರಾ.ಪಂ.ಸದಸ್ಯರಾದ ಆತಿಕಾ ಬಾನು , ಚಂದ್ರಹಾಸ ಕಡೆಗೋಳಿ , ಗಣೇಶ್ ಕೆ. , ಜಸಿಂತಾ ಕುವೆಲ್ಲೋ , ದ.ಕ.ಜಿಲ್ಲಾ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ. , ಬಂಟ್ವಾಳ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗುರುದತ್ ಬಿ.ಬಾಗೇವಾಡಿ , ಬಂಟ್ವಾಳ ತಾಲೂಕು ಉಪತಹಶೀಲ್ದಾರ್ ರೋಹಿನಾಥ್ , ಬಿ.ಎ.ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪ್ರೋ.ಗಂಗಾಧರ ಆಳ್ವ ಮುಖ್ಯ ಅತಿಥಿಗಳಾಗಿದ್ದರು .
ಮಹಿಳಾ ಸಂಚಾಲಕಿಯರಾದ ಸುವಾಸಿನಿ ಬಬ್ಬುಕಟ್ಟೆ , ಪದ್ಮಾವತಿ ಅಮೀನ್ , ಕೋಶಾಧಿಕಾರಿ ಆನಂದ ಕೆ.ಅಸೈಗೋಳಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಹರೀಕಳ , ಉಪಸ್ಥಿತರಿದ್ದರು . ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ ಸ್ವಾಗತಿಸಿದರು . ಪ್ರಧಾನ ಕಾರ್ಯದರ್ಶಿ ಭಾಸ್ಕರ್ ರೈ ಕುಕ್ಕುವಳ್ಳಿ ಪ್ರಸ್ತಾವನಾ ಭಾಷಣ ಮಾಡಿದರು . ಕ್ರೀಡಾ ಸಂಚಾಲಕ ತಾರನಾಥ ರೈ ಸ್ಪರ್ಧೆಗಳ ವಿವರ ನೀಡಿದರು . ಸಾಂಸ್ಕøತಿಕ ಸ್ಪರ್ಧಾ ಸಂಚಾಲಕ ಪಿ.ಡಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು . ಸಂಚಾಲಕ ಅಬ್ದುಲ್ ಅಝೀಝ್ ವಂದಿಸಿದರು .

