ಸುದ್ದಿ9 ಬಂಟ್ವಾಳ : ರಾಣಿ ಅಬ್ಬಕ್ಕ ಕ್ರೀಡೋತ್ಸವವನ್ನು ಅಂತರಾಷ್ಟ್ರೀಯ ಕ್ರೀಡಾಪಟು ಕುಮಾರಿ ಸುಪ್ರೀತಾ ಪೂಜಾರಿ ಉದ್ಘಾಟಿಸಿದರು . ಮಾಜಿ ಶಾಸಕ ಜಯರಾಮ ಶೆಟ್ಟಿ ಕೆ. , ತುಂಬೆ ಗ್ರಾ.ಪಂ.ಸದಸ್ಯರಾದ ಆತಿಕಾ ಬಾನು , ಚಂದ್ರಹಾಸ ಕಡೆಗೋಳಿ , ಗಣೇಶ್ ಕೆ. , ಜಸಿಂತಾ ಕುವೆಲ್ಲೋ , ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ ,ಕ್ರೀಡಾ ಸಂಚಾಲಕ ತಾರನಾಥ ರೈ , ಸಾಂಸ್ಕ್ರತಿಕ ಸ್ಪರ್ಧಾ ಸಂಚಾಲಕ ಪಿ.ಡಿ.ಶೆಟ್ಟಿ , ತುಕಾರಾಮ ಉಳ್ಳಾಲ , ಲೋಕನಾಥ ರೈ , ತ್ಯಾಗಂ , ರಾಜೀವ್ ನಾಯಕ್ , ಜಗದೀಶ್ ರೈ , ಮೋಹನ್ ಸಿರ್ನಾಲ್ , ಸುಬ್ರಾಯ ನಾಯಕ್ , ವಿಠಲ ನಾಯಕ್ ಮತ್ತಿತರರು ಉಪಸ್ಥಿತರಿದ್ದರು .


