ಕೈಕಂಬ: ಗುರುಪುರ ಕೈಕಂಬ ಕೌಡೂರು ಪಾಂಪೆ ಕಾನ್ವೆಂಟ್ ಇದೀಗ ಸುವರ್ಣ ಮಹೋತ್ಸವದತ್ತ ಲಗ್ಗೆ ಇಡುತ್ತಿದ್ದು, ಅದರ ಸಂಭ್ರಮಾಚರನೆಯನ್ನು ಪಾಂಪೆ ಚರ್ಚ್‍ನಲ್ಲಿ ಜ.17ರ ಶನಿವಾರ ಸಂಜೆ 4 ಗಂಟೆಗೆ ಆಚರಿಸಲಾಯಿತು.

ಬೆಥನಿ ಸಂಸ್ಥೆಯ ಮಹಾಮಾತೆ ವಂ ಭ ವಿಲ್ಬರ್ಟ್   ಅಧ್ಯಕ್ಷತೆ ವಹಿಸಿದ್ದರು . ಅವರು ಪಾಂಪೆ ಕಾನ್ವೆಂಟ್ಗೆ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕಾನ್ವೆಂಟ್ನಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ 12 ಮಂದಿ ಭಗಿನಿಯರನ್ನು ಸನ್ಮಾನಿಸಿ ಮಾತನಾಡಿದರು. ವಿಕಾರ್ ವಂ ಪಿ ಯೂಸ್ ಜೇಮ್ಸ್ ಡಿ” ಸೋಜಾ ಋಷಿವನ ರಾಣಿಪುರ ಧಾರ್ಮಿಕ ಭಾಷಣವನ್ನು ಮಾಡಿದರು. ಮುಖ್ಯ ಅಥಿತಿಯಾಗಿ ಮಂಗಳೂರು ಪ್ರಾಂತ್ಯಾಧಿಕಾರಿಣಿ  ವಂ. ಭ. ಮಾರಿಯೇಟ್ ಏಪಿಸ್ಕೋಪಲ್, ವಾಮಂಜೂರು ಚರ್ಚ್  ಧರ್ಮಗುರುಗಳಾದ ವಂ ಸಿಪ್ರಿಯಾನ್ ಪಿಂಟೊ ಹಾಗೂ ಪಾಂಬೂರು ವಂ.ಭ ಪೌಲ್ ರೇಗೊ ಆಗಮಿಸಿದ್ದರು. ಪಾಂಪೆ ಚರ್ಚ್  ಪಾಲನಾ ಸಮಿತಿಯ ಉಪಾಧ್ಯಕ್ಷ ಜೋನ್ಸನ್ ಲೋಬೋ ಉಪಸ್ಥಿತರಿದ್ದರು. ಸ್ಥಳೀಯ ಕಾನ್ವೆಂಟ್ ಸುಪೀರೀಯರ್ ಭ.ಹೆಲೆನ್ ಧನ್ಯವಾದವಿತ್ತರು. ಭ ಆಶ್ವಿನಿ ಸ್ವಾಗತಿಸಿ ನಿರೂಪಿಸಿದರು.

 

1

2

3

4

5

 

1

2

3

4

5

6

7

8

9

10

11

12

13

14

6

 

 

 

 

By suddi9

Leave a Reply

Your email address will not be published. Required fields are marked *