ಬಂಟ್ವಾಳ: ಎರಡು ಪ್ರಮುಖ ತಾಲೂಕುಗಳನ್ನು ಸಂಪರ್ಕಿಸುವ ಬಂಟ್ವಾಳ- ಮೂಡಬಿದ್ರೆ ರಾಜ್ಯ ಹೆದ್ದಾರಿಯ ಸೊರ್ನಾಡುವಿನಲ್ಲಿ ಕಿರು ತೊರೆಗೆ ಸೇತುವೆ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ನಬಾರ್ಡ್ ಆರ್ಐಡಿಎಫ್- 19 ಯೋಜನೆಯಡಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈಯವರ ಶಿಫಾರಸ್ಸಿನಂತೆ 60 ಲಕ್ಷ ರುಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಾಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಳೆಗಾಲ ಮುಗಿಯುತ್ತಿದ್ದಂತೆಯೇ ಸೇತುವೆ ನಿರ್ಮಾಣ ಕಾಮಾಗರಿ ಆರಂಭಗೊಳಿಸಿ ವಾಹನ ಸಂಚಾರಕ್ಕೆ ಪಕ್ಕದಲ್ಲಿಯೇ ಪರ್ಯಾ ಯಯ ರಸ್ತೆ ನಿರ್ಮಿಸಿ ಕೊಡಲಾಯಿತು.
2 (4)

3 (1)

4 (1)
ಆದರೆ ಡಿಸೆಂಬರ್ ತಿಂಗಳಿನಲ್ಲಿ ಮತ್ತೆ ಮಳೆ ಸುರಿದ ಪರಿಣಾಮ ಕಾಮಾಗಾರಿ ಸ್ಥಗಿತಗೊಳಿಸ ಬೇಕಾಯಿತು. ಆದರೆ ಮಳೆಯಿಂದಾಗಿ ಪರ್ಯಾ ಯ ರಸ್ತೆ ಕೆಸರುಮಯವಾಗಿ ವಾಹನ ಸಂಚಾರಕ್ಕೆ ತೀವ್ರ ತೊಡಕುಂಟಾಯಿತು. ಇದೀಗ ಮಳೆಗಾಲ ಮುಗಿದಿದೆ. ಆದರೆ ಸ್ಥಗಿತ ಗೊಂಡ ಕಾಮಾಗಾರಿ ಮತ್ತೆ ಆರಂಭಗೊಂಡಿಲ್ಲ. ಸದ್ಯಕ್ಕೆ ಕೆಸರಿನ ಸಮಸ್ಯೆ ನಿವಾರಣೆಯಾಗಿದೆ. ಆದರೆ ಪರ್ಯಾಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಕಿದ ಜಲ್ಲಿ ಹುಡಿಯಿಂದ ಧೂಳಿನ ಸಮಸ್ಯೆ ಪ್ರಾರಂಭಗೊಂಡಿದೆ.
ಇದರಿಂದಾಗಿ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಮುಖ ಮುಚಿಕೊಂಡು ಪ್ರಯಾಣಿಸುವ ಸ್ಥಿತಿ ನಿರ್ಮಾಣಗೊಂಡಿದೆ. ಉಸಿರಾಟ, ಉಬ್ಬಸ ಮೊದಲಾದ ಶ್ವಾಸಕೋಶದ ತೊಂದರೆಯಿಂದ ಬಳಲುವ ರೋಗಿಗಳು ಈ ರಸ್ತೆಯ ಮೂಲಕ ಸಂಚರಿಸದರೆ ರೋಗ ಮತ್ತಷ್ಟು ಉಲ್ಭಣಗೊಳ್ಳುವ ಭೀತಿ ಉಂಟಾಗಿದೆ. ಇದೀಗ ಸೇತುವೆ ಪುನರ್ ನಿರ್ಮಾಣ ಕಾಮಾಗಾರಿಯೂ ಸ್ಥಗಿತಗೊಂಡಿರುವುದರಿಂದ ಇನ್ನು ಎಷ್ಟು ಸಮಯ ಈ ಶಿಕ್ಷೆ ಅನುಭವಿಸ ಬೇಕು ಎನ್ನುವ ಪ್ರಶ್ನೆ ನಿತ್ಯ ಪ್ರಯಾಣಿಕರದ್ದು.

By Suddi9

Leave a Reply

Your email address will not be published. Required fields are marked *