ಬಂಟ್ವಾಳ:ಮಹಿಳೆಯರು ಜಾಗೃತರಾಗಿ ಸಂಸ್ಕಾರಯುತ ಜೀವನವನ್ನು ಸಾಗಿಸಿದಾಗ ಮಾತ್ರ ಮಹಿಳೆಯರ ಮೇಲೆ ಸವಾರಿ ನಡೆಯಲು ಸಾಧ್ಯವಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್ ಹೇಳಿದರು. ಅವರು ಬಿ.ಸಿ.ರೋಡಿನ ಸ್ತ್ರೀಶಕ್ತಿ ಭವನದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ದ.ಕ ಇವರ ಆಶ್ರಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಸಾಗಾಟ ಮಾರಾಟ ನಿವಾರಣೆಗಾಗಿ ಗ್ರಾ.ಪಂ. ಮಟ್ಟದ ಕಾವಲು ಸಮಿತಿ ಸದಸ್ಯರಿಗೆ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಸಂಘಟಿತರಾಗಿ ಒಳಿತು ಕೆಡುಕುಗಳನ್ನು ತಿಳಿದುಕೊಂಡು ಇತರರಿಗೆ ಆದರ್ಶರಾಗಿ ಬದುಕೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಗಳೂರು ಡಿಸಿಪಿಒ ಉಸ್ಮಾನ್, ವಿಟ್ಲ ಸಿಡಿಪಿಒ ಸುಧಾ ಜೋಶಿ, ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಸಂಪನ್ಮೂಲ ವ್ಯಕ್ತಿ ಉಮೇಶ ನಿರ್ಮಲ್ ಉಪಸ್ಥಿತರಿದ್ದರು.
ಬಂಟ್ವಾಳ ಸಿಡಿಪಿಒ ಮಲ್ಲಿಕಾ ಸ್ವಾಗತಿಸಿ, ಎಸಿಡಿಪಿಒ ಅನ್ನಪೂರ್ಣ ವಂದಿಸಿದರು
