ಸುದ್ದಿ9 ಕೈಕಂಬ: ಚದುರಿ ಹೋಗಿರುವ ಬಿಲ್ಲವರನ್ನು ಒಂದೇ ವೇದಿಕೆಯಡಿಗೆ ತಂದು ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಬಲೀಕರಣಗೊಳಿಸಲು `ಬಿಲ್ಲವ ಏಕೀಕರಣ ಸಮಿತಿ’ ರಚಿಸಲಾಗಿದ್ದು, ಇದರ ಅಧ್ಯಕ್ಷತೆಯನ್ನು ರವಿಪೂಜಾರಿ ಚಿಲಿಂಬಿ ವಹಿಸಿದ್ದಾರೆ. ಇದರ ಪೂರ್ವಭಾವಿ ಸಭೆಯು ಜ.15ರ ಗುರುವಾರ ಗುರುಪುರ ಕೈಕಂಬದ ಮೆಗಾಫ್ಲಾಜಾದಲ್ಲಿ ನೈಸ್ ಕ್ಯಾಟರಸ್ ಮಾಲಕರಾದ ದೀಪಕ್ ಕೋಟ್ಯಾನ್ ನೇತೃತ್ವದಲ್ಲಿ ನಡೆದಿದೆ.

22

23

24

25

26

20 21
ಈ ಸಮಿತಿಯನ್ನು ವಲಯ ಮಟ್ಟದಲ್ಲಿ ರಚಿಸಿ ಅಲ್ಲಿಂದಲೇ ಇಬ್ಬರನ್ನು ಆಯ್ಕೆ ಮಾಡಿ ಅವರಿಂದ ಬಿಲ್ಲವ ಸಮುದಾಯದ ಏಕಿಕರಣಗೊಳಿಸಲು ತೀರ್ಮಾನಿಸಲಾಗಿದೆ. ಮುಂದೆ ಈ ಸಭೆಯನ್ನು ದೊಡ್ಡ ಮಟ್ಟದಲ್ಲಿ ರಚಿಸಲು ಉದ್ದೇಶಿಸಲಾಗಿದ್ದು, ಬಿಲ್ಲವ ಮುಖಂಡರನ್ನು ಒಟ್ಸು ಸೇರಿಸಲ್ಲಿಕ್ಕಿದೆ. ಜಿಲ್ಲೆಯ ಎಲ್ಲಾ ಬಿಲ್ಲವರನ್ನು ಒಟ್ಟು ಸೇರಿಸಿಸಲು ಉದ್ದೇಶಿಸಲಾಗಿದ್ದು, ಎಲ್ಲಾ ಬಿಲ್ಲವರನ್ನು ಒಟ್ಟು ಸೇರಿಸಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಮುಂದಿನ ಫೆಬ್ರವರಿ ತಿಂಗಳಲ್ಲಿ ಬಹಿರಂಗ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ಬಿಲ್ಲವ ಮುಖಂಡ ರವಿಪೂಜಾರಿ ಸಭೆಯಲ್ಲಿ ತಿಳಿಸಿದ್ದಾರೆ.
ನಂತರ ಮಾತಾಡಿದ ಅವರು, ಮಂಗಳೂರಿನಲ್ಲಿ ಈಗಾಗಲೇ ಬಿಲ್ಲವ ಸಮಿತಿಯ ಕಚೇರಿ ತೆರೆಯಲಾಗಿದ್ದು, `ಕೋಟಿ-ಚೆನ್ನಯ’ ಎಂಬ ರಕ್ತನಿಧಿ ಸ್ಥಾಪಿಸಲಾಗಿದೆ. ಇದರಿಂದ ರಕ್ತದ ಅಗತ್ಯವಿರುವ ಬಿಲ್ಲವರಿಗೆ ರಕ್ತ ಪೂರೈಕೆಯನ್ನುದ್ದೇಸಿಸಲಾಗಿದೆ. ಅಲ್ಲದೆ ಬಡಬಿಲ್ಲವ ಮಕ್ಕಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿವೇತನ ನೀಡಲಿದೆ. ಬಿಲ್ಲವ ಬಡ ಹೆಣ್ಣುಮಕ್ಕಳಿಗೆ ಮದುವೆಗೆ ಸಹಾಯಹಸ್ತ ನೀಡಲುದ್ದೇಶಿಸಲಾಗಿದೆ. ಈ ಬಗ್ಗೆ ಕಚೇರಿಯಲ್ಲಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ದೀಪಕ್ ಕೋಟ್ಯಾನ್ ಮಾತಾಡಿ, ಎಲ್ಲಾ ಚದುರಿಹೋಗಿರುವ ಬಿಲ್ಲವರನ್ನು ಒಟ್ಟು ಸೇರಿಸಿ ಬಿಲ್ಲವರನ್ನು ಮುಖ್ಯವಾಹಿನಿಗೆ ಕರೆತರುವುದು ಈ ಸಮಿತಿಯ ಉದ್ದೇಶವಾಗಿದೆ. ಈ ಸಭೆಯನ್ನು ರಾಜಕೀಯ ರಹಿತವಾಗಿ ನಡೆಸಲಿಕ್ಕಿದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಗುರುಪುರ ನಾರಾಯಣ ಗುರು ¸ಸಂಘದ ಅಧ್ಯಕ್ಷ ಸುಧಾಕರ ಅಮೀನ್, ಕದ್ರಿ ಬಿಲ್ಲವ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ, ಕುಪ್ಪೆಪದವು ಬಿಲ್ಲವ ಸಂಘದ ಅಧ್ಯಕ್ಷ ಪುರುಷೋತ್ತಮ, ಗಂಜಿಮಠ ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣ ಅಮೀನ್ ಹಾಗೂ ಕಾಜಿಲದ ಮನೋಜ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *