ಸುದ್ದಿ9 ಮೂಡಬಿದಿರೆ: ಮೂಡುಬಿದರೆ ಜೈನಮಠದಲ್ಲಿ ಇಂದ್ರಧ್ವಜ ಮಂಡಲ ಆರಾಧನೆ ಲೋಕಕಲ್ಯಾಣಾರ್ಥವಾಗಿ ಜ.15 ರಿಂದ 22ರ ವರೆಗೆ ನಡೆಯಲಿದೆ ಎಂದು ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಜೈನಮಠದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಜ. 14ರಂದು ಕನಕಗಿರಿ ಜೈನಮಠದ ಸ್ವಸ್ತಿಶ್ರೀ ಭುವನಕೀರ್ತಿ ಸ್ವಾಮೀಜಿ ಯಜ್ಞಶಾಲೆ ಉದ್ಘಾಟಿಸಲಿದ್ದಾರೆ. ವಿವಿಧ ದಿನಗಳಲ್ಲಿ ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಸ್ವಾಮೀಜಿ, ಕಾರ್ಕಳ ಸ್ವಸ್ತಿಶ್ರೀ ಲಲಿತಕೀರ್ತಿ ಸ್ವಾಮೀಜಿ, 108 ಪ್ರಸಂಗಸಾಗರ ಮುನಿಮಹಾರಾಜರು, ಅರಹಂತಗಿರಿ ಜೈನಮಠದ ಸ್ವಸ್ತಿಶ್ರೀ ಧವಲಕೀರ್ತಿ ಭಟ್ಟಾರಕ ಸ್ವಾಮೀಜಿಗಳು, ಹಸ್ತಿನಾಪುರದ ಬ್ರಹ್ಮಚಾರಿ ರವೀಂದ್ರಕೀರ್ತಿ, ಕೊಲ್ಲಾಪುರ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿಗಳು, ಸೋಂದಾ ಜೈನಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮುಂಬೈಯ ಅರಿಹಂತ ಋಷಿ ಸ್ವಾಮೀಜಿ, ಕಂಬದಹಳ್ಳಿ ಜೈನಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಲಕ್ಕವಳ್ಳಿ ಜೈನ ಮಠದ ಸ್ವಸ್ತಶ್ರೀ ವೃಷಭಸೇನ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.15 ರಿಂದ ಕುಬೇರ ಚೌಗುಲೆ ಅವರಿಂದ ಕಾವ್ಯಗೋಷ್ಠಿ, 18 ರಂದ ಆಳ್ವಾಸ್ ವಿದ್ಯಾರ್ಥಿಗಳಿಂದ ಭಾರತೀಯ ಸಾಂಸ್ಕ್ರತಿಕ ನೃತ್ಯ ವೈವಿಧ್ಯ, ನ 20 ರಂದು ಯುವ ಸಂಗೀತ ಕಲಾವಿದ ಸುಬಿತ್‍ಸಿಂಗ್ ಫದಮ್, ಅಮೃತಸರ ಪಂಜಾಬ್ ಇವರಿಂದ ಸಿತಾರ್ ವಾದನ 26 ರಂದು ಬೆಳಿಗ್ಗೆ ಸಮಾರೋಪ ಸಮಾರಂಭ ನಡೆಯಲಿದ್ದು ಹಂಪನಾಗರಾಜಯ್ಯ ಭಾಗವಹಿಸಲಿದ್ದಾರೆ. ಪ.ಪೂ 108 ಪ್ರಸಂಗ ಸಾಗರ ಮುನಿಮಹಾರಾಜರು ಶ್ರವಣ ಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬಳಿಕ ಎಂ. ರವಿರಾಜ್ ಅವರಿಂದ ಭಾವಗಾನ ಕಾರ್ಯಕ್ರಮ ಜರಗಲಿದೆ.
ಅಪರೂಪಕ್ಕೆ ನಡೆಯುವ ಇಂದ್ರಧ್ವಜ ಮಂಡಲ ಆರಾಧನೆಯಲ್ಲಿ 16*16 ಅಡಿಯ ಮಂಡಲಗಳಲ್ಲಿ 458 ಚೈತ್ಯಾಲಯಗಳನ್ನು ರಚಿಸಲಾಗುತ್ತಿದೆ. ಪ್ರತಿಯೊಂದಕ್ಕೂ ಆಘ್ರ್ನ ನೀಡಲಾಗುವುದು. 8 ದಿನಗಳ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಬಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದ ಪರಮಸಂರಕ್ಷಕರಾಗಿದ್ದಾರೆ ಎಂದು ಅವರು ತಿಳಿಸಿದರು.ಬಸದಿಗಳ ಮುಕ್ತೇಸರರಾದ ಆನಡ್ಕ ದಿನೇಶ್ ಕುಮಾರ್, ಪಟ್ನ ಶೆಟ್ಟಿ ಸುದೇಶ್ ಕುಮಾರ್, ಅಭಿಜಿತ್ ಎಂ., ಡಾ ವಿದ್ಯಾನಂದ ಜೈನ್ ಉಪಸ್ಥಿತರಿದ್ದರು.
