ಮೆಕ್ಸಿಕೋ: ನೀಲಿ ಚಿತ್ರಗಳ ಮಾಜಿ ತಾರೆ, ಹಾಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಹಿಂದಿ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡ ನಂತರ ಅತ್ಯಂತ ಬ್ಯುಸಿಯಾಗಿದ್ದು, ವಿಶ್ರಾಂತಿಗಾಗಿ ಈಗ ಸ್ವಲ್ಪ ಬಿಡುವು ಮಾಡಿಕೊಂಡಿರುವ ಅವರು ಬೀಚಿನಲ್ಲಿ ಕಾಲ ಕಳೆದಿದ್ದಾರೆ.
ಇದಕ್ಕಾಗಿ ಮೆಕ್ಸಿಕೋಗೆ ತೆರಳಿರುವ ಸನ್ನಿ ಲಿಯೋನ್ ಕಪ್ಪು ಬಣ್ಣದ ಈಜುಡುಗೆ ಧರಿಸಿರುವ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲ ತಾಣ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೆಕ್ಸಿಕೋದ ಕ್ಯಾನ್ ಕ್ಯಾನ್ ಬೀಚಿನಲ್ಲಿ ಆರಾಮವಾಗಿ ಕಾಲ ಕಳೆಯುತ್ತಿರುವ ಸನ್ನಿ ಶೀಘ್ರದಲ್ಲೇ ಮತ್ತೆ ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಸಲುವಾಗಿ ಮರಳಲಿದ್ದಾರೆ.
ಕಳೆದ ವರ್ಷ ಸನ್ನಿ ಮೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಅವರ ‘ರಾಗಿಣಿ ಎಂಎಂಎಸ್’ ಬಿಡುಗಡೆಯಾಗಿ ಬಾಕ್ಸಾಫೀಸ್ ಗಳಿಕೆಯಲ್ಲಿ ಸದ್ದು ಮಾಡಿದ್ದರೆ, ಟೀನಾ ಅಂಡ್ ಲೋಲೋ, ಮಸ್ತಿಜಾದೆ ಮತ್ತು ಕುಚ್ ಕುಚ್ ಲೂಚಾ ಹೈ ಚಿತ್ರೀಕರಣವೂ ಪೂರ್ಣಗೊಂಡು ತೆರೆಗೆ ಬರಲು ಸಿದ್ದವಾಗಿವೆ.

