mbd_mar5_7

ಸುದ್ದಿ 9 ಮೂಡುಬಿದರೆ: ಕಾಲೇಜು ಜೀವನದಿಂದ ಜೆ.ಪಿ. ಚಳವಳಿಯಲ್ಲಿ ಪಾಲ್ಗೊಂಡು ಜನತಾ ಪರಿವಾರದಲ್ಲಿ ಸಕ್ರೀಯರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಇದೀಗ ಪಕ್ಷವು ಜಿಲ್ಲೆಯಲ್ಲಿ ನೆಲೆ ಕಳೆದುಕೊಳ್ಳುತ್ತಿರುವುದನ್ನು ಪರಿಗಣಿಸಿ ಪಕ್ಷದ ಪ್ರಾಥಮಿಕ ಹುದ್ದೆ ಮತ್ತು ಜಿಲ್ಲಾ ಪ್ರಧಾನ ಕಾರ್ಯದಶರ್ಿ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಜೆಡಿಎಸ್ ಹಿರಿಯ ಮುಖಂಡ ಕೆ.ಕೃಷ್ಣರಾಜ ಹೆಗ್ಡೆ ತಿಳಿಸಿದ್ದಾರೆ.

ಅವರು ಮೂಡುಬಿದರೆ ಪ್ರೆಸ್ಕ್ಲಬ್ನಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಂಸ್ಥಾ ಕಾಂಗ್ರೆಸ್, ಜನತಾ ಪಕ್ಷ, ಜನತಾದಳ, ಲೋಕಶಕ್ತಿ ಪಕ್ಷದಲ್ಲಿ ಗುರುತಿಸಿಕೊಂಡು ಇದೀಗ ಜಾತ್ಯಾತೀತ ಜನತಾದಳದಲ್ಲಿ ಜಿಲ್ಲಾ ಕಾರ್ಯದಶರ್ಿಯಾಗಿ ಕಾರ್ಯತತ್ಪರರಾಗಿದ್ದರು. ರಾಜೀನಾಮೆ ಪತ್ರವನ್ನು ಪಕ್ಷದ ಜಿಲ್ಲಾಧ್ಯಕ್ಷ ಎಂ. ಬಿ. ಸದಾಶಿವರಿಗೆ ರವಾನಿಸಲಾಗಿದ್ದು, ಹಿರಿಯ ನಾಯಕ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿಯವರಿಗೂ ತಿಳಿಸಿರುವುದಾಗಿ ಹೇಳಿದರು.

ಯಾವುದೇ ಬೇರೆ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ಇಲ್ಲಿವರೆಗೆ ಯೋಚನೆ ಮಾಡಿಲ್ಲವೆಂದು ತಿಳಿಸಿದರು. ಗಿರೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು .

 

By suddi9

Leave a Reply

Your email address will not be published. Required fields are marked *