ಸುದ್ದಿ9 ಮೂಡಬಿದಿರೆ: ದಿನದ ಎರಡನೇ ಮಹತ್ವದ ಕಾರ್ಯಕ್ರಮ ಮಹಾಲೀಲದಲ್ಲಿ ಮಹಾನ್ ಕಲಾವಿದರ ನಾದ ಸಂಗಮ ಕಲೈಮಾಮಣಿ ಶಿವಮಣಿಯವರ – ವಿಶ್ವದ ವಿವಿಧ ತಾಳ ವಾದ್ಯಗಳ ನಿನಾದದೊಂದಿಗೆ ಮೋಡಿ ಮಾಡಿತು. ತನ್ನ ಡ್ರಮ್ಸ್ ಸಮೂಹದೊಂದಿಗೆ ಬೀಟ್ಸ್‍ಗಳ ಮಹಾಪೂರವನ್ನೇ ಹರಿಸಿದ ಶಿವಮಣಿಯ ಅಬ್ಬರ ಸ್ಟೀಫನ್ ದೇವಸ್ಸಿ – ಕೀಬೋರ್ಡ್‍ನಲ್ಲಿ ತೋರಿದ ಕೈಚಳಕದ ಜುಗಲ್ ಬಂಧಿಯ ನಡುವೆ ಸಮಯ ಕಳೆದುಹೊದದ್ದೇ ತಿಳಿಯದಂತಹ ಅನುಭವ ಎಲ್ಲರದ್ದಾಗಿತ್ತು. ಮಹಾಗಣಪತೇ ಮನಸಾಸ್ಮರಾಮಿ.. ಎನ್ನುವ ದೇಶೀ ಹಾಡಿನೊಂದಿಗೆ ತನ್ನ ಪ್ರದರ್ಶನ ಆರಂಭಿಸಿದ ಶಿವಮಣಿ
ಬಾಲ ಭಾಸ್ಕರ್ ಅವರ ವಯೋಲಿನ್ ಸಾಥ್ ಜತೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಕೇಳುಗರನ್ನು ರಂಜಿಸಿದರು.   ದಿನದ ಕಾರ್ಯಕ್ರಮದ ಕೊನೆಯಲ್ಲಿ ಜಿ.ಸಿ. ನೈಲ್ ಕಾಲೇಜು ಪತ್ರಾನ್ , ಪಂಜಾಬ್‍ನ ತಂಡದ ಪಂಜಾಬಿ ಜನಪದ ನೃತ್ಯ ವೈವಿಧ್ಯ: ರಂಗ ಮಲ್ಹರ್ ಪರ್ಫೋರ್ಮಿಂಗ್ ಆಟ್ರ್ಸ್, ಅಹಮದಾಬಾದ್ ಗುಜರಾತ್ ಇವರ ಗುಜರಾತಿ ಜನಪದ ನೃತ್ಯ ವೈವಿಧ್ಯ, ಜತೆಗೆ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ವಿರಾಸತ್ ವೈಭವಕ್ಕೆ ಇನ್ನಷ್ಟು ರಂಗೇರಿಸಿತು
mbd_jan10_1 (7)

mbd_jan10_1 (1)

mbd_jan10_1 (2)

mbd_jan10_1 (3)

mbd_jan10_1 (4) (1)

mbd_jan10_1 (5)

mbd_jan10_1 (6)

By Suddi9

Leave a Reply

Your email address will not be published. Required fields are marked *