ಸುದ್ದಿ9 ಮೂಡಬಿದಿರೆ: ಸ್ಟ್ರಿಂಗ್ ಸ್ಟ್ರಕ್ ಪೂರ್ವ ಪಶ್ಚಿಮ ಅಪೂರ್ವ ವಾದನ ಸಂಗಮ ಕಾರ್ಯಕ್ರಮದಲ್ಲಿ ಸಿತಾರ್ ಜತೆ ಪುರ್ಬಯನ್ ಚಟರ್ಜಿ ತನ್ನ ಕೈಚಳಕದ ಮೂಲಕ ನಾದಲೋಕದ ಭಾವ ತರಂಗಗಳನ್ನು ವಿದ್ಯಾಗಿರಿಯ ತುಂಬೆಲ್ಲ ಪಸರಿಸುತ್ತಾ ಆವರಿಸಿಕೊಂಡರು. ಡ್ರಮ್ಸ್‍ನಲ್ಲಿ ತೌಫೀಕ್ ಖುರೇಶಿ ಸಾಥ್ ನೀಡುವುದರ ಜತೆಗೆ ತನ್ನ ಕಂಠನಾದ ವೈವಿಧ್ಯದ ಮೂಲಕವೂ ನಾದ ಮಾಧುರ್ಯವನ್ನು ಉಣಬಡಿಸಿದ್ದು ಪ್ರೇಕ್ಷಕರಿಗೆ ಮುದ ನೀಡಿತು. ಕೀಬೋರ್ಡ್‍ನಲ್ಲಿ ಅತುಲ್ ರನಿಂಗ, ವಯೋಲಿನ್‍ನಲ್ಲಿ ದೀಪಕ್ ಪಂಡಿತ್ ,ಆದಿತ್ಯ ಕಲ್ಯಾಣಪುರ -ತಬ್ಲಾ ಶ್ರೀಧರ್ ಪಾರ್ಥಸಾರಥಿ -ಮೃದಂಗ
ಕ್ಷಿತಿಜ್ ತಾರೆಯವರ ಹಾಡುಗಾರಿಕೆಯಲ್ಲಿ ಮುನ್ನಡೆದ ವಾದನ ಸಂಗಮ ತಾಂತ್ರಿಕ ಅಡಚಣೆಗಳ ನಡುವೆಯೂ ಮುದ ನೀಡಿತು.
ಪೂರ್ವ ಪಶ್ಚಿಮದ ವಾದನ ದ್ವಂದ್ವಗಳು ಕೇಳುಗರ ಹೃನ್ಮನಕ್ಕೆ ತಂಪೆರೆದರೆ ಸಿತಾರ್ ಮೂಲಕ ಪುರ್ಬಯನ್ ಚಟರ್ಜಿ ತನ್ನ ವಿದ್ವತ್ ಪ್ರದರ್ಶನದೊಂದಿಗೆ ಗಮನ ಸೆಳೆಯುವ ಪ್ರದರ್ಶನ ನೀಡಿದರು. ಭಾವಪರವಶತೆಯೊಂದಿಗೆ ಕೇಳುಗರನ್ನೂ ನಾದನಶೆಗೆ ದೂಡಿದ ಚಟರ್ಜಿ ಬಳಗ ರಘುಪತಿ ರಾಘವ ರಾಜಾರಾಮ್.., ಸಾರೇ ಜಹಾಂಸೆ ಅಚ್ಛಾ… ವಂದೇ ಮಾತರಂ ಹೀಗೆ ನಾದ ಮಾಧುರ್ಯವನ್ನು ಹೊರಸೂಸುತ್ತಿದ್ದರೆ ಕಿಕ್ಕಿರಿದು ತುಂಬಿದ್ದ ಸಭಾಂಗಣ ಭಾವಪರವಶವಾಯಿತು.
NPB_4402

NPB_4341 (1)

NPB_4371

IMG_9856

By Suddi9

Leave a Reply

Your email address will not be published. Required fields are marked *