ಸುದ್ದಿ9 ಮೂಡುಬಿದರೆ: ಬೆಟ್ಕೇರಿ ಬಳಿ ನಿವಾಸಿ, ಆಶ್ರಿತಾ ಸ್ಟುಡಿಯೋ ಮಾಲಕ ತಾರನಾಥ ರಾವ್ (57.ವ.) ಶನಿವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಮೂಡುಬಿದರೆ ವಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 1986 ರಲ್ಲಿ ತನ್ನ ಅಣ್ಣನ ಪ್ರದೀತಾ ಸ್ಟುಡಿಯೋದಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡ ತಾರನಾಥ ಬಳಿಕ 1996 ರಲ್ಲಿ ಸ್ವಂತ ಸ್ಟುಡಿಯೋ ಆಶ್ರಿತಾದ ಮಾಲಕರಾದರು.ಕ್ರಿಕೆಟ್ ಮತ್ತು ಶಟಲ್ ಆಟದಲ್ಲಿ ಚಾಂಪಿಯನ್ ಆಟಗಾರರಾಗಿದ್ದರು. ಇವರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.ಮೂಡುಬಿದರೆ ವಲಯ ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ನವರು ಸಂತಾಪ ಸೂಚಿಸಿದ್ದಾರೆ.

