ಬಂಟ್ವಾಳ:ಬರಿಮಾರು ಸ.ಹಿ.ಪ್ರಾ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವು ನಡೆಯಿತು. ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ಡಿ. ದೇರಾಜೆ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀ ನಾರಾಯಣ ಸುವರ್ಣ ಧ್ವಜಾರೋಹಣಗೈದರು
ಗೋಳ್ತಮಜಲು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ. ತಾಲೂಕು ಪಂಚಾಯತ್ ಸದಸ್ಯರಾದ ಕಮಲಾಕ್ಷಿ ಕೆ ಪೂಜಾರಿ, ಕಡೇಶ್ವಾಲ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಸದಾಶಿವ ಜಿ. ಪಾಪೆತ್ತಿಮಾರು, ಎಸ್.ಡಿ.ಎಮ್.ಸಿ ಅಧ್ಯಕ್ಷ ಉಮೇಶ್ ಪಿ, ಅನಂತ್ ಕುಮಾರ್ ಉಪಸ್ಥಿತಿರಿದ್ದರು. ಇದೇ ವೇಳೆ 8ನೇ ತರಗತಿ ವಿದ್ಯಾಥರ್ಿಗಳಿಗೆ ಸೈಕಲ್ ವಿತರಿಸಲಾಯಿತು. ತಾಲೂಕು ಪಂಚಾಯತ್ ವತಿಯಿಂದ ಶಾಲೆಗೆ ಪೀಠೋಪಕರಣ ಮತ್ತು ಕರುಣಾಕರ ದಬರ್ೆ ಹಾಗೂ ಸುಧಾಕರ ದೇವಶ್ಯ ಇವರು ಉದಾರವಾಗಿ ನೀಡಿದ ಬ್ಯಾಂಡ್ ವಾದನ ಪರಿಕರಗಳನ್ನು ಒಪ್ಪಿಸಲಾಯಿತು. ಬಳಿಕ ಸ್ಥಳೀಯ ಅಂಗನವಾಡಿ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕಿ ಕಲ್ಯಾಣಿ ಜಿ ಸ್ವಾಗತಿಸಿದರು.. ಗಾಯತ್ರಿ ವಂದಿಸಿ, ಅಶ್ವತ್ ಕಾರ್ಯಕ್ರಮ ನಿರೂಪಿಸಿದರು.
