ಸುದ್ದಿ9 ಮೂಡುಬಿದರೆ: ಈಚೆಗೆ ತಾಯಿ ಮನೆಗೆಂದು ಹೋಗಿ ನಾಪತ್ತೆಯಾಗಿದ್ದ ವಿವಾಹಿತೆಯನ್ನು ಮಂಡ್ಯದ ತನ್ನ ಸ್ನೇಹಿತೆಯ ಮನೆಯಲ್ಲಿ ಪೊಲೀಸರು ಪತ್ತೆ ಹಚ್ಚಿ ಕರೆತಂದಿದ್ದಾರೆ.
ಕಡಂದಲೆಯ ಹರೀಶ್ ಎಂಬವರ ಪತ್ನಿ ಆನಂದಿ(23)ಎಂಬವರು ಈಚೆಗೆ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪತಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಆಕೆ ಮಂಡ್ಯದ ತನ್ನ ಸ್ನೇಹಿತನ ಮನೆಯಲ್ಲಿ ಪತ್ತೆಯಾಗಿದ್ದರು. ನಂದಿತಾ ಅವರಿಗೆ ಒಂದೂವರೆ ವರ್ಷಗಳ ಹಿಂದೆ ಹರೀಶ್ ಜತೆ ಮದುವೆಯಾಗಿದ್ದು ಕಡಂದಲೆಯಲ್ಲಿ ವಾಸವಾಗಿದ್ದರು. ಇವರು ಮಂಡ್ಯದಲ್ಲಿ ಓದುತ್ತಿದ್ದಾಗ ಸ್ನೇಹಿತನೊಬ್ಬನ ಪರಿಚಯವಾಗಿದ್ದು ಆತ ಈಚೆಗೆ ಇವರ ಮನೆಯ ಕಾರ್ಯಕ್ರಮಕ್ಕೆ ಬಂದವ ಆನಂದಿಯ ಮೊಬೈಲ್ ಸಂಖ್ಯೆಯನ್ನು ಪಡಕೊಂಡು ಹೋಗಿದ್ದ ಎನ್ನಲಾಗಿದೆ. ನಂತರ ಇವರಿಬ್ಬರ ಮಧ್ಯೆ ಮೊಬೈಲ್ ಸಂಭಾಷಣೆ ನಡೆದಿತ್ತೆನ್ನಲಾಗಿದೆ. ತಾಯಿ ಮನೆಗೆಂದು ಹೊರಟು ನಾಪತ್ತೆಯಾಗಿದ್ದ ಆನಂದಿ ಮಂಡ್ಯದ ತನ್ನ ಸ್ನೇಹಿತನ ಸಹೋದರಿಯ ಮನೆಗೆ ಹೋಗಿದ್ದರೆನ್ನಲಾಗಿದೆ. ಇವರ ಮೊಬೈಲ್ ನೆಟ್‍ವರ್ಕ್ ಮೂಲಕ ಮಾಹಿತಿ ಪಡಕೊಂಡ ಪೊಲೀಸರು ಅವರನ್ನು ಪತ್ತೆ ಹಚ್ಚಿ ಕರೆತಂದಿದ್ದಾರೆ.

By suddi9

Leave a Reply

Your email address will not be published. Required fields are marked *