mbd_mar5_2 (1)

ಸುದ್ದಿ 9ಮೂಡುಬಿದರೆ: ವಿಪ್ರೋ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದಿರುವ `ಕಲಿಕೆಯೊಂದಿಗೆ ಗಳಿಕೆ’ ವಿಪ್ರೋ ನೇಮಕಾತಿಯಲ್ಲಿ ಆಯ್ಕೆಗೊಂಡಿರುವ 122 ವಿದ್ಯಾಥರ್ಿಗಳು ಹಾಗೂ ಅವರಪೋಷಕರ ಜತೆ ಮುಖಾಮುಖಿ ಕಾರ್ಯಕ್ರಮ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ನಡೆಯಿತು.

ವಿಪ್ರೋ ಸಂಸ್ಥೆಯ ಕ್ಯಾಂಪಸ್ ನೇಮಕಾತಿ ವಿಭಾಗದ ಅಂತಾರಾಷ್ಟ್ರೀಯ ಮುಖ್ಯಸ್ಥ ರಾಜೀವ ಕುಮಾರ್ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ವಿಪ್ರೋ ಸಂಸ್ಥೆಯು ಕ್ಷೀಪ್ರಗತಿಯಲ್ಲಿ ಬೆಳೆಯುತ್ತಿರುವ ಸಂಸ್ಥೆ. ಯುವ ತಂತ್ರಜ್ಞರಿಗೆ ವಿಫುಲ ಅವಕಾಶವಿದ್ದು, ಈ ನಿಟ್ಟಿನಲ್ಲಿ ಸಂಸ್ಥೆಯು ದೇಶ ವಿವಿಧ ಕಾಲೇಜುಗಳಲ್ಲಿ ನೇಮಕಾತಿಗಳನ್ನು ಹಮ್ಮಿಕೊಂಡಿದೆ. ಆಳ್ವಾಸ್ ಸಂಸ್ಥೆಯಲ್ಲಿ ಇದಕ್ಕೆ ಪೂರಕ ವಾತಾವರಣ ಲಭ್ಯವಾಗಿದೆ. ಕಂಪೆನಿಯ ಜತೆಗೆ ಯುವಕರೂ ಅದರಲ್ಲೂ ವಿದ್ಯಾಥರ್ಿಗಳ ಏಳಿಗೆ ಕಾಣಬೇಕು ಎಂಬ ಹಂಬಲದಿಂದ `ಕಲಿಕೆಯೊಂದಿಗೆ ಗಳಿಕೆ’ ಹಮ್ಮಿಕೊಳ್ಳಲಾಗಿದೆ ಎಂದರು.

ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಥರ್ಿಗಳು ಗುಣಮಟ್ಟದ ಶಿಕ್ಷಣ ಪಡೆಯುವುದು ಮಾತ್ರವಲ್ಲ. ಔದ್ಯೋಗಿಕ ಅವಕಾಶಗಳು ಬಂದಾಗ ಸದುಪಯೋಗ ಮಾಡಿಕೊಳ್ಳಬೇಕು. ಸಂಸ್ಥೆಯು ಹಮ್ಮಿಕೊಳ್ಳುತ್ತಿರುವ ಉದ್ಯೋಗಮೇಳಗಳಲ್ಲಿ ಪಾಲ್ಗೊಂಡು ಬದುಕು ರೂಪಿಸಿಕೊಳ್ಳಬೇಕು. ಕೇವಲ ಆಳ್ವಾಸ್ ಸಂಸ್ಥೆಗಳ ವಿದ್ಯಾಥರ್ಿಗಳು ಮಾತ್ರವಲ್ಲ. ಇತರ ಕಾಲೇಜು ಅದರಲ್ಲೂ ಸಕರ್ಾರಿ ಕಾಲೇಜಿನ ವಿದ್ಯಾಥರ್ಿಗಳು ಆಳ್ವಾಸ್ನಲ್ಲಿ ನಡೆಯುವ ಉದ್ಯೋಗ ಮೇಳಗಳಲ್ಲಿ ಭಾಗವಹಿಸಬೇಕು. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವುದರಿಂದ ಕೀಳರಿಮೆ ದೂರವಾಗುತ್ತದೆ. ಉತ್ತಮ ಅವಕಾಶಗಳು ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಪ್ರೋ ನೇಮಕಾತಿ ವಿಭಾಗದ ಕನರ್ಾಟಕ ಮುಖ್ಯಸ್ಥೆ ನೀತು ಜಾಯ್, ಆಳ್ವಾಸ್ ಸಂಸ್ಥೆ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. ಕಾಲೇಜಿನ ತರಬೇತಿ ಹಾಗೂ ನೇಮಕಾತಿ ವಿಭಾಗದ ಮುಖ್ಯಸ್ಥ ಪ್ರೊ.ರುಚಿರ್ ಆನಂದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಂಬಿಎ ಮುಖ್ಯಸ್ಥ ಪ್ರೊ.ಅಲೆಕ್ಸಾಂಡರ್ ಮಾಥ್ಯೂಸ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ರವೀಂದ್ರ ಶೆಣೈ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *