
ಸುದ್ದಿ 9ಕೈಕಂಬ: ಯಾವುದೇ ಒಂದು ಕೆಲಸ ಸುಸೂತ್ರವಾಗಿ ನೆರವೇಬೇಕಾದರೆ ಅದಕ್ಕೆ ನಾಲಕು ಮಂದಿ ಪ್ರಮುಖರು ಆಗಿರುತ್ತದೆ. ಒಬ್ಬ ಕೆಲಸ ಮಾಡುವಾತ, ಇನ್ನೊಬ್ಬ ಮಾಡಿಸುವಾತ, ಇನ್ನೊಬ್ಬ ಪ್ರೇರಣೆ ನೀಡುವಾತ. ಇಂಥಾ ಕೆಲಸಗಳಲ್ಲಿ ನಮ್ಮ ಉದ್ದೇಶ ಚೆನ್ನಾಗಿದ್ದರೆ ಪರಮಾತ್ಮ ನಮಗೆ ಅನುಗ್ರಹ ಕೊಡುತ್ತಾನೆ ಸಂಸ್ಕೃತ ವಿದ್ವಾನ್ ಮಂಗಳೂರಿನ ಶಾರದಾ ವಿದ್ಯಾಲಯದ ಉಪನ್ಯಾಸಕ ರಮೇಶ ಆಚಾರ್ಯ ನಾರಳ ಹೇಳದರು. ಅವರು ಮಾ.2ರಂದು ಶ್ರೀ ಕೃಷ್ಣ ಫ್ರೆಂಡ್ಸ್ ಕ್ಲಬ್ ಕೆಳಗಿನ ಬೈಲ್ ಮಳಲಿ ಇದರ ಸತ್ಯನಾರಾಯಾಣ ದಶಮಾನೋತ್ಸವ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡಿದರು.
ನಂತರ ಮಾತಾಡಿದ ಅವರು ಸಮಾಜಕ್ಕೆ ಉತ್ತಮ ಚೈತನ್ಯ ನೀಡುವ ಸಂಘಟನೆಯ ಅವಶ್ಯಕತೆ ಇದೆ ಕಷ್ಟದಲ್ಲಿರುವವರಿಗೆ ಭಾವನಾತ್ಮಕವಾಗಿ ಸ್ಪಂದಿಸಿ ಅವರ ಸುಖ ದುಃಖದಲ್ಲಿ ಪಾಲ್ಗೊಳ್ಳುವ, ಬಾಂಧವ್ಯ ಬೆಸೆಯುವ ಕೆಲಸವನ್ನು ಮಾಡಬೇಕು. ಸಮಾಜದೊಂದಿಗೆ ಕೆಲಸ ಮಾಡುತ್ತಾ ಜನರಿಗೆ ಜಾಗೃತಿಯ ಮೂಡಿಸುತ್ತಾ, ಪ್ರೇರಣೆ ನೀಡುತ್ತಾ ಸಂಘಟನೆ ಕೆಲಸ ಮಾಡಬೇಕು. ಮನರಂಜನೆಗಿಂತಲೂ ಆಧ್ಯಾತ್ಮಿಕತೆಯಲ್ಲಿ ಯುವಕರು ಒಲವು ಹೊಂದಿ ಮಾನಸಿಕ ದೃಢತೆಯನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು
ಮಳಲಿ- ಗೋಕಲ್ಲು ರಸ್ತೆ ತಡೆಗೋಡೆಗೆ 2 ಲಕ್ಷ: ನಳಿನ್
ಮುಖ್ಯ ಅತಿಥಿಯಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಳಲಿಯ ಗೀಕಲ್ಲು ಮುಖಾಂತರವಾಗಿ ಹಾದು ಹೋದ ಇಕ್ಕಟ್ಟಾದ ರಸ್ತೆಗೆ ತಡೆಗೋಡೆನಿಮರ್ಿಸಲು ಸುಮಾರು ಎರಡು ಲಕ್ಷ ರೂ. ಮೀಸಲಿಡಲಾಗಿದೆ ಎಂದು ಅವರು ಹೇಳಿದರು.
ಒಂದು ಸಂಸ್ಥೆ ಎಷ್ಟು ವರ್ಷ ಇದೆ ಎನ್ನುವುದಕ್ಕಿಂತ ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದೆ ಎಂಬುದನ್ನು ಮನಗಂಡು ಅದೇ ರೀತಿ ಕೆಲಸ ಮಾಡಬೇಕು ಎಂದು ಯುವಕರಿಗೆ ಕರೆ ನೀಡಿದರುನಳಿನ್.
ಈ ಸಂದರ್ಭದಲ್ಲಿ ಮಳಲಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸದ್ಯ ನಿವೃತ್ತಿಗೊಂಡಿರುವ ರಾಮಚಂದ್ರ ಭಟ್ ಹಾಗೂ ಸುಬ್ರಾಯ ಭಟ್ ಹಾಗೂ ಇತ್ತೀಚೆಗೆ ತೈಲ ವಿಭಹಕ ಯಂತ್ರ ಕಂಡುಹಿಡಿದು ರಾಷ್ಟ್ರ ಪ್ರಶಸ್ತಿ ಕಂಡು ಹಿಡಿದ ಮೋಕ್ಷಿತಾ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ರಾಮಚಂದ್ರ ಈ ಗುರುವಂದನೆ ಗುರುಪರಂಪರೆಗೆ ಸಂದ ಗೌರವವಾಗಿದೆ ಎಂದರು. ಸಂಘದ ಅಧ್ಯಕ್ಷ ಸೋಹನ್ ಅಧ್ಯಕ್ಷೀಯ ನೆಲೆಯಲ್ಲಿ ಮಾತಾಡಿದರು. ವೇದಿಕೆಯಲ್ಲಿ ಉಪನ್ಯಾಸಕ ವಾದಿರಾಜ ಕಲ್ಲೂರಾಯ ಉಪಸ್ಥಿತರಿದ್ದರು. ಉಮನಾಥ ಸ್ವಾಗತಿಸಿ, ಗಿರೀಶ್ ಧನ್ಯವಾದವಿತ್ತರು. ಈ ವೇಳೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.
