ಸುದ್ದಿ9 ಮೂಡುಬಿದರೆ: ಬೆಂಗಳೂರಿನ ಬೊಮ್ಮಸಂದ್ರ ಹೆಬ್ಬುಗೋಡಿಯ ಹೆಬ್ಬುಲಿಯಗೂಡು ಸಂಸ್ಥೆ ವತಿಯಿಂದ ಜ. 1 ರಿಂದ 4. ರವರೆಗೆ ನಡೆದ ರಾಜ್ಯಮಟ್ಟದ ಆಹ್ವಾನಿತ 15 ತಂಡಗಳ ಖೋ-ಖೋ ಸ್ಪರ್ಧೆಯಲ್ಲಿ ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್ನ ಪುರುಷರ ತಂಡವು ಬೆಂಗಳೂರಿನ ಪಯೋನಿಯರ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಪಡೆದಿದೆ.
ಆಳ್ವಾಸ್ನ ರವಿ.ಎಂ.ವಾಲ್ಕೆ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿದ್ದಾರೆ. ಮಹಿಳಾ ವಿಭಾಗದ ಪಂದ್ಯಾಟದಲ್ಲಿ ಆಳ್ವಾಸ್ ಮಹಿಳೆಯರ ತಂಡ ದ್ವಿತೀಯ ಸ್ಥಾನ ಪಡೆದಿದೆ.


