ಸುದ್ದಿ9ಮೂಡುಬಿದರೆ: ಅಮೇರಿಕಾದ ಪೆನ್ಸಿಲ್ವೇನಿಯಾ ವಿ.ವಿ.ಯ ಪೆನ್ನ್ ಸೋಶಿಯಲ್ ಪಾಲಿಸಿ ಮತ್ತು ಪ್ರಾಕ್ಟೀಸ್ನ ಪ್ರೊ. ಫೆಮಿಡಾ ಹ್ಯಾಂಡಿ ಹಾಗೂ 10 ಮಂದಿ ವಿದ್ಯಾಥರ್ಿಗಳು ನೆಲ್ಲಿಕಾರು ವ್ಯವಸಾಯ ಸಹಕಾರಿ ಬ್ಯಾಂಕ್ಗೆ ಶನಿವಾರ ಭೇಟಿ ನೀಡಿದರು.
ನವೋದಯ ಸ್ವಸಹಾಯ ತಂಡಗಳ ಕಾರ್ಯವೈಖರಿ, ವ್ಯವಹಾರ ಹಾಗೂ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಅವರು ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಮಾತನಾಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬೇಂಕ್ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ ಗ್ರಾಮೀಣ ಪ್ರದೇಶದ ಜನರು ಸ್ವಸಹಾಯ ಸಂಘಗಳ ಮುಖಾಂತರ ಸ್ವಾವಲಂಬಿಗಳಾಗಿದ್ದಾರೆ ಎಂದರು.
ಪೆನ್ಸಿಲ್ವೇನಿಯಾ ವಿ.ವಿ.ಯ ಪ್ರೊ.ಫೆಮಿಡಾ ಹ್ಯಾಂಡಿ ಮಾತನಾಡಿ ಗ್ರಾಮೀಣ ಪ್ರದೇಶದ ಜನರ ಜೀವನ ಸ್ಥಿತಿಗತಿಯ ಬಗ್ಗೆ ತಮ್ಮ ಕಾಲೇಜಿನ ವಿದ್ಯಾಥರ್ಿಗಳು ಅಧ್ಯಯನ ಮಾಡುತ್ತಿರುವುದಾಗಿ ತಿಳಿಸಿದರು.
ಬ್ಯಾಂಕ್ನ ಅಧ್ಯಕ್ಷ ಯುವರಾಜ ಹೆಗ್ಡೆ, ಉಪಾಧ್ಯಕ್ಷ ಸಂತೋಷ್ ಕುಮಾರ್, ನವೋದಯ ಟ್ರಸ್ಟ್ನ ಸಿಇಒ ಪೂಣರ್ಿಮಾ ಶೆಟ್ಟಿ, ನಿದರ್ೇಶಕರಾದ ಜಯವರ್ಮ ಜೈನ್, ಪ್ರೀತಿ, ಹೆನ್ರಿ ಫೆನರ್ಾಂಡೀಸ್, ಬ್ಯಾಂಕ್ನ ಕಾರ್ಯನಿರ್ವಹಣಾಧಿಕಾರಿ ಮಹಾದೇವ ಭಟ್, ಅರುಣ್ ಕುಮಾರ್, ನವೋದಯದ ನಾರಾಯಣ ಉಪಸ್ಥಿತರಿದ್ದರು.
ನವೋದಯ ಸ್ವಸಹಾಯ ಸಂಘದ ಸದಸ್ಯರು ಸ್ವಸಹಾಯ ಸಂಘದ ಮುಖಾಂತರ ಅಭಿವೃದ್ಧಿ ಹೊಂದಿರುವ ಬಗ್ಗೆ ತಿಳಿಸಿದರು.


