ನೀರಾ ಪಾಲಿಸಿ ರೂಪಿಸುವತನಕ ಮೂರ್ತೆದಾರರಿಗೆ ಅಬಕಾರಿ ಕಾಯ್ದೆ ಅನ್ವಯ
ಸುದ್ದಿ9ಬಂಟ್ವಾಳ, ಜ. 5: ರಾಜ್ಯದಲ್ಲಿ ನೀರಾ ಪಾಲಿಸಿ ರೂಪಿಸುವತನಕ ಮೂತರ್ೆದಾರರಿಗೆ ಅನ್ವಯ ಆಗುವ ಎಲ್ಲಾ ನಿಯಮಾವಳಿಗಳು, ಅಬಕಾರಿ ಕಾಯ್ದೆಯಂತೆ ಅನ್ವಯ ಆಗುವುದು ಎಂದು ರಾಜ್ಯ ಸರಕಾರದ ಕಾರ್ಯದಶರ್ಿ ರಾಜೀವ್ ಚಾವ್ಲಾ ಹೇಳಿದ್ದಾರೆ.
ಅವರು ಜ. 5ರಂದು ತುಂಬೆ ನೀರಾ ಘಟಕಕ್ಕೆ ಭೇಟಿಯಾಗಿ ಅಕಾರಿಗಳ ಜೊತೆಗೆ ಮತ್ತು ರೈತ ಸಂಘ ಮತ್ತು ತೆಂಗು ಅಭಿವೃದ್ದಿ ಸಂಘದ ಪದಾಕಾರಿಗಳ ಜೊತೆಗೆ ಮಾತುಕತೆ ನಡೆಸಿದರು.
ದ.ಕ.ಮತ್ತು ಉಡುಪಿ ಜಿಲ್ಲೆ ಹೊರತುಪಡಿಸಿ ರಾಜ್ಯದಲ್ಲಿ ಶೇಂದಿ ಮಾರಾಟಕ್ಕೆ ಖಾಸಗಿ ವ್ಯವಸ್ಥೆ ಇರುವುದಿಲ್ಲ. ಪ್ರಸ್ತುತ ಶೇಂದಿಯಂತೆ ನೀರಾ ಇಳಿಸುವುದಾಗಿದೆ.
ನೀರಾವನ್ನು ಶೇಂದಿ ಮಾರಾಟದಂತೆ ಮಾಡಲಾಗದು. ಅದಕ್ಕೆ ಪ್ರತ್ಯೇಕ ವ್ಯವಸ್ಥೆಯ ಮೂಲಕ ಮಾರಾಟಕ್ಕೆ ಕ್ರಮ ಅಗತ್ಯ. ಶೇಂದಿ ಮಾರಾಟದಂತೆ ಒಂದೆಡೆ ವ್ಯವಹಾರ ನಡೆದರೆ ನೀರಾದ ಪ್ರತ್ಯೇಕತೆ ತಿಳಿಯದೆ ಜನರು ಅದನ್ನು ಶೇಂದಿ ಎಂದೇ ಪರಿಷಣಿಸುವ ಭೀತಿ ಇದೆ ಎಂದರು.
ಪ್ರಸ್ತುತ ಕನರ್ಾಟಕದಲ್ಲಿ ನೀರಾ ವ್ಯವಸ್ಥೆಯು ಇನ್ನೂ ಹುಟ್ಟದ ಮಗುವಿನಂತಾಗಿದೆ. ಕಳೆದ ಎರಡು ವರ್ಷಗಳಿಂದ ಘಟಕ ನಿಮರ್ಾಣ ಆದರೂ ಯಾವೊಂದು ಪ್ರಗತಿಯು ನಡೆದಿಲ್ಲ. ಸರಕಾರದ ಮಟ್ಟದಲ್ಲಿ ನೀರಾಕ್ಕಾಗಿ ಪ್ರತ್ಯೇಕ ಕಾನೂನು ಆಗುವಂತೆ ಅಧ್ಯಯನ ವರದಿ ನೀಡುವುದಾಗಿಯೂ ತಿಳಿಸಿದರು.
ಸಿಪಿಸಿಆರ್ಐ ವಿಜ್ಞಾನಿ ಡಾ| ಕೆ.ಬಿ. ಹೆಬ್ಬಾರ್, ಜೊಯಿಂಟ್ ಡೈರೆಕ್ಟರ್ ಡಾ| ದುಂಡಿ ಉಪಸ್ಥಿತರಿದ್ದರು. ಮೂತರ್ೆದಾರ ಸಹಕಾರ ಮಹಾಮಂಡಲ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅವರು ನೀರಾ ಘಟಕ್ಕೆ ಮೊದಲು ಭೇಟಿ ನೀಡಿದ ಸರಕಾರದ ಕಾರ್ಯದಶರ್ಿ ಚಾವ್ಲಾರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು.
ಹಾಪ್ಕಾಮ್ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ, ಬಂಟ್ವಾಳ ತಾಲೂಕು ತೆಂಗು ಉತ್ಪಾದಕರ ಮಂಡಳಿ ಅಧ್ಯಕ್ಷ ರಾಜಶೇಖರ ರೈ, ರಾಜ್ಯ ರೈತ ಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಪಾಲಕ್ಕಾಡ್ ತೆಂಗು ಉತ್ಪಾದಕರ ಮಂಡಳಿ ಸಲಹೆಗಾರ ಸತೀಶ್, ಕನರ್ಾಟಕ ತೆಂಗು ಅಭಿವೃದ್ದಿ ಸಂಘದ ಅಧ್ಯಕ್ಷ ರಾಜಾ ಬಂಟ್ವಾಳ ಪಾಲ್ಗೊಂಡಿದ್ದರು.
ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿದರ್ೇಶಕ ಯೋಗೇಶ ಹೆಚ್. ಆರ್ ಉಪಸ್ಥಿತರಿದ್ದು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಚಾವ್ಲಾ ಅವರಿಗೆ ಪೂರಕ ಮಾಹಿತಿ ನೀಡಿದರು. ಬಂಟ್ವಾಳ ತಾಲೂಕು ತೋಟಗಾರಿಕ ಉಪನಿದರ್ೇಶಕ ಸಂಜೀವ ನಾಯ್ಕರು ಸ್ವಾಗತಿಸಿ ವಂದಿಸಿದರು.
(ರಾಜೀವ್ ಚಾವ್ಲಾರು ನೀರಾ ಘಟಕದ ಯಂತ್ರೋಪಕರಣಗಳನ್ನು ಪರಿಶೀಲಿಸಿದರು)

