ವೇಣೂರು: ಶ್ರೀಸೂರ್ಯನಾರಾಯಣ ಕ್ಷೇತ್ರ ಬಲ್ಲಂಗೇರಿ- ಅಂಗರಕರಿಯ ಇಲ್ಲಿ ಕೈಮಾರು ಶ್ರೀ ಸುಬ್ರಹ್ಮಣ್ಯ ಉಡುಪರ ಪೌರೋಹಿತ್ಯದಲ್ಲಿ ಶ್ರೀ ಮಹಾಗಣಪತಿ ಹವನದ ಉದ್ಯಾಪನಾ ಸಮಾರಂಭ ಜನವರಿ 3ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.ಪೂರ್ವಾಹ್ನ ವಾಗೀಶ್ವರೀ ಹವನ , ಗಣಪತಿ ಹವನ ,ಶ್ರೀ ಸತ್ಯನಾರಾಯಣ ಪೂಜೆ , ಪೂರ್ಣಾಹುತಿ, ಮಹಾಮಂಗಳಾರತಿ ಪ್ರಸಾದ ಭೋಜನ ಕಾರ್ಯಕ್ರಮಗಳು ನಡೆದವು.

2

1
ಈ ಸಂದರ್ಭದಲ್ಲಿ ಶ್ರೀಮಹಾಗಣಪತಿ ಹವನದ ಉದ್ಯಾಪನಾ ಸಮಿತಿಯ ಅಧ್ಯಕ್ಷ ಕೈದೊಟ್ಟು ಆನಂದ, ಕಾರ್ಯದರ್ಶಿ ನಾಗೇಶ್ ಕೋಟ್ಯಾನ್, ಕೋಶಾಧಿಕಾರಿ ಸತೀಶ್ ಶೆಟ್ಟಿ, ಶ್ರೀ ಸೂರ್ಯನಾರಾಯಣ ಆರಾಧನಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಉದಯ ಕುಮಾರ್, ಕ್ಷೇತ್ರ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಯನ್.ಸೀತಾರಾಮ ರೈ, ಕಾರ್ಯದರ್ಶಿ ಪಿ.ಹರಿಪ್ರಸಾದ್ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *