ಮೂಡುಬಿದಿರೆ : ಸಂಘಟನೆಯ ಬಗ್ಗೆ ಶಿಕ್ಷಕರಿಗೆ ಕೀಳರಿಮೆ ಇರಬಾರದು. ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಸಮಸ್ಯೆಗಳು ಹಲವು ಇರಬಹುದು ಆದರೆ ಅವುಗಳನ್ನು ಬದಿಗೊತ್ತಿ ಶಿಕ್ಷಣ ಮತ್ತು ಸಂಘಟನೆ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಶ್ರದ್ಧಾಪೂರ್ವಕ ಪ್ರಯತ್ನಿಸಬೇಕು ಎಂದು ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ಅವರು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು,ದ.ಕ ಜಿಲ್ಲಾ ಸಮಿತಿ ಮಂಗಳೂರು ಮತ್ತು ಮೂಡುಬಿದಿರೆ ವಲಯದ ಸಹಭಾಗಿತ್ವದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾ ಸಂಘದ ಪದಗ್ರಹಣ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಲಾಭದ ಉದ್ದೇಶದಿಂದಾಗಿ ಜಿಲ್ಲೆಗಳಲ್ಲಿ ಖಾಸಗಿ ಶಾಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಜಿಲ್ಲೆಯಲ್ಲಿರುವ ಸರಕಾರಿ ಶಾಲೆಗಳಲ್ಲಿ 4000 ಶಿಕ್ಷಕರಿದ್ದಾರೆ ಆದರೆ ಖಾಸಗಿ ಅನುದಾನಿತ ಶಾಲೆಗಳಲ್ಲಿ 12 ಸಾವಿರದಷ್ಟು ಶಿಕ್ಷಕರಿದ್ದಾರೆ ಮುಂದೆ 10 ವರ್ಷದಲ್ಲಿ ಸರಕಾರಿ ಶಾಲೆಯ ಶಿಕ್ಷಕರ ಸಂಖ್ಯೆ 1 ಸಾವಿರಕ್ಕೆ ಸಿಮೀತಗೊಂಡು ಅನುದಾನಿತ ಶಾಲೆಗಳ ಶಿಕ್ಷಕರ ಸಂಖ್ಯೆ 24 ಸಾವಿರಕ್ಕೆ ದಾಟಬಹುದು ಇದು ಅಘಾತಕಾರಿ ಸಂಗತಿ ಈ ನಿಟ್ಟಿನಲ್ಲಿ ಸರಕಾರಿ ಶಾಲಾ ಶಿಕ್ಷಕರು ಸಂಘಟಿತರಾಗಿ ಸರಕಾರಿ ಶಾಲೆಗಳನ್ನು ಸಬಲೀಕರರಣಗೊಳಿಸುವಂತೆ ಸರಕಾರದ ಗಮನ ಸೆಳೆಯುವ ಮಹತ್ತರವಾದ ಜವಾಬ್ದಾರಿಯಿದೆ ಎಂದು ಹೇಳಿದರು.
ಸರಕಾರ ಸರಕಾರಿ ಶಾಲೆಗಳಿಗೆ ವಿವಿಧ ಯೋಜನೆಗಳನ್ನು ತರುವ ಮೂಲಕ ಶಿಕ್ಷಕರ ಮೇಲೆ ಒತ್ತಡವನ್ನು ಹೆಚ್ಚಿಸಲಾಗುತ್ತಿದೆ. ಈ ವ್ಯವಸ್ಥೆಗಳು ಅನುದಾನಿತ ಶಾಲೆಗಳಿಗೆ ಇರುವುದಿಲ್ಲ ಅಲ್ಲದೆ ಅಲ್ಲಿ 3 ವರ್ಷದ ಮಕ್ಕಳಿಗೂ ಶಾಲೆಗೆ ಬರಲು ಅವಕಾಶವಿರುವುದರಿಂದ ಸರಕಾರಿ ಶಾಲೆಗಳಿಗೆ ವಿದ್ಯಾಥರ್ಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದ ಅವರು ಖಾಸಗಿ ಶಾಲೆಗಳಲ್ಲಿರುವ ವ್ಯವಸ್ಥೆ ಮತ್ತು ಸೌಲಭ್ಯಗಳನ್ನು ಸರಕಾರಿ ಶಾಲೆಗಳಿಗೂ ನೀಡುವಂತೆ ಸರಕಾರ ಕ್ರಮಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ದ.ಕ. ಜಿಲ್ಲಾ ಅಧ್ಯಕ್ಷ ಶಿವಶಂಕರ ಭಟ್.ಕೆ. ಅಧ್ಯಕ್ಷತೆಯನ್ನು ವಹಿಸಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಶಿಕ್ಷಕರ ಸಮಘದ ರಾಜ್ಯ ಪ್ರಧಾನ ಕಾರ್ಯದಶರ್ಿ ವಿ.ಎಂ.ನಾರಾಯಣ ಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪ್ರಾಥಮಿಕ ಶಿಕ್ಷಕರ ಸಂಘ ಇತರ ಸಂಘಗಳಿಗೆ ಸರಿಸಮಾನವಾಗಿ ಬೆಳೆದಿದೆ. ದ.ಕ.ಜಿಲ್ಲೆಯಲ್ಲಿ ಚುನಾವಣೆ ಸಹಿತ ಇತರ ಸಮಸ್ಯೆಗಳು ಕಡಿಮೆ ಆದರೆ ಉತ್ತರ ಕನರ್ಾಟಕ ಭಾಗದಲ್ಲಿ ಮಹಿಳಾ ಶಿಕ್ಷಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಇಂತಹ ಪರಿಸ್ಥಿತಯಲ್ಲಿ ಶಿಕ್ಷಕರು ಸಂಘಟಿತರಾಗಿ ಮಹಿಳಾ ಶಿಕ್ಷಕರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಸನ್ಮಾನ : ಮುಖ್ಯ ಅತಿಥಿಗಳಾಗಿ ಭಾಗವಹಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿದರ್ೇಶಕ ವಾಲ್ಟರ್.ಹೆಚ್.ಡಿ’ಮೆಲ್ಲೋ, ರಾಜ್ಯ ಸಹ ಕಾರ್ಯದಶರ್ಿ ಚಂದ್ರಶೇಖರ, ಮೈಸೂರು ಜಿಲ್ಲಾ ಸಂಘದ ಅಧ್ಯಕ್ಷ ಬಸವರಾಜು ಮತ್ತು ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಅವರನ್ನು ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಉಪಾಧ್ಯಕ್ಷರುಗಳಾದ ಜಗದೀಶ ಶೆಟ್ಟಿ, ಪ್ರಫುಲ್ಲಾ, ಮೂಡುಬಿದಿರೆ ವಲಯ ಶಿಕ್ಷಣ ಸಂಯೋಜಕಿ ರಾಜಶ್ರೀ ನಾಯಕ್, ಮಾಜಿ ಜಿಲ್ಲಾಧ್ಯಕ್ಷ ಶ್ರೀಧರ್ ಉಲ್ಲಾಳ್, ಪ್ರ.ಕಾರ್ಯದಶರ್ಿ ಮೂಡುಬಿದಿರೆ ವಲಯದ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ತುಕ್ರಪ್ಪ ಕೆಂಬಾರೆ, ಸಂಘಟನಾ ಕಾರ್ಯದಶರ್ಿಗಳಾದ ಪುಷ್ಪಾವತಿ, ಜಯರಾಮ್, ಸಹ ಕಾರ್ಯದಶರ್ಿ ಬೇಬಿ, ನಾಗೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಸಂಘದ ಪ್ರ.ಕಾರ್ಯದಶರ್ಿ ರಾಮಕೃಷ್ಣ ಮಲ್ಲಾರ, ಸ್ವಾಗತಿಸಿದರು. ಶಿಕ್ಷಕರಾದ ನಾರಾಯಣ ಮಿಜಾರ್, ಸುರೇಂದ್ರ ಮತ್ತು ಶಿಕ್ಷಕಿ ಅನಿತಾ ಕಾರ್ಯಕ್ರಮ ನಿರೂಪಿಸಿದರು. ಖಜಾಂಜಿ ನವೀನ್.ಪಿ.ಎಸ್. ವಂದಿಸಿದರು.
ಪ್ರತಿ ಶಾಲೆಗೆ ಒಬ್ಬ ಮುಖ್ಯೋಪಾಧ್ಯಾಯ, ವರ್ಗಕ್ಕೆ ಒಬ್ಬ ಶಿಕ್ಷಕರನ್ನು ನಿಯುಕ್ತಿಗೊಳಿಸಬೇಕು, ಪ್ರತಿ ಪ್ರಾಥಮಿಕ ಶಾಲೆಗೆ ಒಂದು ಪೂರ್ವ ಪ್ರಾಥಮಿಕ ಶಾಲೆಯನ್ನು ಆರಂಭಿಸಬೇಕು, ನಲಿ-ಕಲಿ ಯೋಜನೆಯನ್ನು ರದ್ದುಗೊಳಿಸಬೇಕು, ನಿರಂತರ ವ್ಯಾಪಕ ಮೌಲ್ಯ ಮಾಪನ ಪದ್ಧತಿಯನ್ನು ಬದಲಾವಣೆ ಮಾಡಿ ಈ ಹಿಂದೆ ಇದ್ದ ಮೌಲ್ಯ ಮಾಪನ ವ್ಯವಸ್ಥೆಯನ್ನೇ ಮುಂದುವರೆಸಬೇಕು, 300ರೂ ವಿಶೇಷ ವೇತನವನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ ವೇತನ ತಾರತಮ್ಯವನ್ನು ನಿವಾರಣೆ ಮಾಡಬೇಕು, 1ರಿಂದ 7ನೇಯ ವರ್ಗ ಇರುವ ಎಲ್ಲಾ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸರಕಾರದಿಂದ ಮಂಜೂರಾಗಿರುವ ಎಲ್ಲಾ ಖಾಲಿ ಹುದ್ದೆಗಳಿಗೆ ಬಡ್ತಿ ನೀಡುವಂತೆ ಸೂಚಿಸಬೇಕು,1-7 ವರ್ಗ ಇರುವ ಕಡೆಗೆ ಮುಖ್ಯೋಪಾಧ್ಯಾಯರ ಹುದ್ದೆಗಳನ್ನು ಮಂಜೂರು ಮಾಡಬೇಕು ಮತ್ತು ರಾಜ್ಯಾದ್ಯಂತ “ಸಮಾನ ಶಾಲಾ ಶಿಕ್ಷಣ”ನೀತಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯಾಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಲಾಯಿತು.


