ಸುದ್ದಿ9ಮೂಡುಬಿದಿರೆ :  ಕರ್ನಾಟಕ    ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ಇದರ ಮೂಡುಬಿದಿರೆ ವಲಯ ಸಮಿತಿಯ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸಮಾರಂಭವು ಶನಿವಾರ ಇಲ್ಲಿನ ಸಮಾಜ ಮಂದಿರ ಸಭಾಭವನದಲ್ಲಿ ನಡೆಯಿತು. ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಲಯ ಈವರೆಗಿನ ಪದಾಧಿಕಾರಿಗಳು ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿರುತ್ತಾರೆ. ಪ್ರಾಥಮಿಕ ಶಾಲಾ ಶಿಕ್ಷಕರು ಒಡೆದ ಮನಸ್ಸುಗಳನ್ನು ಒಂದುಗೂಡಿಸಿಕೊಂಡು ಉತ್ತಮವಾದ ಕೆಲಸಗಳನ್ನು ಮಾಡಬೇಕು. ವಲಯದಲ್ಲಿ ಸರಕಾರಿ ಶಾಲೆಗಳಲ್ಲಿ ಕಳೆದ ಬಾರಿಗಿಂತ ವಿದ್ಯಾಥರ್ಿಗಳ ಸಂಖ್ಯೆ ಜಾಸ್ತಿಯಾಗಿದೆ. ಶಿಕ್ಷಕರು ಶಾಲೆಗಳಲ್ಲಿ ವಿದ್ಯಾಥರ್ಿಗಳಿಗೆ ಉತ್ತಮವಾಗಿ ಶಿಕ್ಷಣವನ್ನು ನೀಡುತ್ತಿರುವುದು ತನ್ನ ಗಮನಕ್ಕೆ ಬಂದಿದೆ ಮುಂದೆಯೂ ಇದೇ ರಿತಿ ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದ ಅವರು  ನೂತನವಾಗಿ ಆಯ್ಕೆಯಾಗಿರುವ ಸಮಿತಿಗಳು ಹೆಚ್ಚಿನ ಉತ್ಸಾಹದಿಂದ ಕೆಲಸಗಳನ್ನು ಮಾಡಬೇಕು. ಪದಾಧಿಕಾರಿಗಳಿಗೆ ತಾನು ಹೆಚ್ಚಿನ ಕೆಲಸಗಳನ್ನು ನೀಡದೆ ಪ್ರೋತ್ಸಾಹ ನೀಡಲು ಸದಾ ಸಿದ್ಧನಿದ್ದೇನೆ ಎಂದರು.
ಕಳೆದ 5 ವರ್ಷಗಳಿಂದ ಅಧ್ಯಕ್ಷತೆಯನ್ನು ವಹಿಸಿ ಶಿಕ್ಷಕರನ್ನು ಒಗ್ಗೂಡಿಸುತ್ತಾ ಬಂದಿರುವ ಅಧ್ಯಕ್ಷ ತುಕ್ರಪ್ಪ ಕೆಂಬಾರೆ ಅವರು  ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ನಾಗೇಶ್ ಎಸ್. ಅವರಿಗೆ ಪುಸ್ತಕಗಳನ್ನು ಹಸ್ತಾಂತರಿಸುವ ಮೂಲಕ ಪದಗ್ರಹಣವನ್ನು ನೆರವೇರಿಸಿದರು.
ಸನ್ಮಾನ : ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ ಅವರನ್ನು ಶಿಕ್ಷಕರ ಸಂಘದ ವತಿಯಿಂದ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಜಿಲ್ಲಾ ಸಮಿತಿಯ ಅಧ್ಯಕ್ಷ ಶಿವಶಂಕರ ಭಟ್, ಪ್ರ.ಕಾರ್ಯದಶರ್ಿ ರಾಮಕೃಷ್ಣ ಮಲ್ಲಾರ, ಜಿ.ಉಪಾಧ್ಯಕ್ಷೆ ಪ್ರಪುಲ್ಲಾ ಶೆಟ್ಟಿ, ಬಿಆರ್ಸಿ ಸುರೇಖಾ, ಒಕ್ಕೂಟದ ರಾಯಿ ರಮೇಶ್, ನೂತನ ಸಂಘದ ಪದಾಧಿಕಾರಿಗಳು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಘದ ನೂತನ ಉಪಾಧ್ಯಕ್ಷೆ ಸುಮತಿ ಹೆಗ್ಡೆ ಸ್ವಾಗತಿಸಿದರು. ತುಕ್ರಪ್ಪ ಕೆಂಬಾರೆ ವರದಿ ವಾಚಿಸಿದರು. ಶಿಕ್ಷಕರಾದ ಸುರೇಂದ್ರ ಮತ್ತು ನಾರಯಣ ಕಾರ್ಯಕ್ರಮ ನಿರೂಪಿಸಿದರು. ಪ್ರ.ಕಾರ್ಯದಶರ್ಿ ಮೆಲ್ವಿನ್ ಶಿವಾನಂದ ಅಲ್ಬುಕಕರ್್ ವಂದಿಸಿದರು.

002ಪ

By Suddi9

Leave a Reply

Your email address will not be published. Required fields are marked *