ಮೂಡುಬಿದಿರೆ: ಅವಕಾಶಗಳು ನಿಮರ್ಾಣವಾಗಿರುವುದು ನಮ್ಮ ರಾಷ್ಟ್ರದಲ್ಲಿ ಸ್ವಾತಂತ್ರ್ಯಾನಂತರದ ಮೂರು ದಶಕಗಳ ಮಹತ್ವದ ಬೆಳವಣಿಗೆ.ಯುವಜನತೆ ವಿವಿಧ ಕ್ಷೇತ್ರಗಳಲ್ಲಿರುವ ವಿಪುಲ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯೆಗಾಗಿ ವಿದ್ಯಾಥರ್ಿಗಳು ತ್ಯಾಗಿಗಳಾಗುವ ಮೂಲಕ ಶ್ರದ್ಧೆಯಿಂದ ಯಶಸ್ಸು ತಮ್ಮದಾಗಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧಮರ್ಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಶನಿವಾರ ಇನ್ನೋವೇಟಿವ್ ಲನರ್ಿಂಗ್ ಫೌಂಡೇಶನ್(ರಿ) ಇದರ ಅಂಗ ಸಂಸ್ಥೆಯಾಗಿ ಇಲ್ಲಿನ ಕಲ್ಲಬೆಟ್ಟು ಪರಿಸರದಲ್ಲಿ ಕಳೆದ ಮೂರು ವರ್ಷಗಳಿಂದ ಕಾಯರ್ಾಚರಿಸುತ್ತಿರುವ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾಥರ್ಿಗಳು ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಮುಕ್ತ ಮನಸ್ಸಿನ ವಿಶ್ವಾತ್ಮರಾಗಬೇಕು ಎಂದವರು ಹೇಳಿದರು.

ಮೂಡುಬಿದಿರೆಯಲ್ಲಿ ಎಕ್ಸಲೆಂಟ್ ಪಿ.ಯು ಕಾಲೇಜ್ ನೂತನ ಕಟ್ಟಡ ಉದ್ಘಾಟನೆ
ಜೈನ ಮಠದ ಶ್ರೀ ಭಟ್ಟಾರಕ ಚಾರುಕೀತರ್ಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಕರಾವಳಿಯ ಪರಿಸರ ವಿಶೇಷ ಶೈಕ್ಷಣಿಕ ವಲಯವಾಗಿ ಬಲಗೊಳ್ಳುತ್ತಿದ್ದು ಪರಿಸರ ಪ್ರಜ್ಞೆ ಮತ್ತು ಸಹಬಾಳ್ವೆಯ ಸಾತ್ವಿಕ ವ್ಯಕ್ತಿತ್ವ ರೂಪಿಸುವ ಶಿಕ್ಷಣ ನಮ್ಮದಾಗಬೇಕು. ಆರೋಗ್ಯದ ಚಿಕಿತ್ಸಕ ದೃಷ್ಟಿಯಿಂದ ಮನಸ್ಸನ್ನು ಪರಿಪಕ್ವಗೊಳಿಸುವ ಭಾರತೀಯ ರಂಗಕಲೆಯ ಆರಾಧನೆಯ ಅವಕಾಶವೂ ಶಿಕ್ಷಣದಲ್ಲಿರಬೇಕು ಎಂದರು.
ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ್ ಅಜಿಲ, ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಎಸ್.ಡಿ.ಎಂ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಮಾತನಾಡಿ ಮನಸ್ಸು ಮತ್ತು ಕೈಗಳಿಗೆ ಶಿಕ್ಷಣ ಸಿಗುವಂತಾಗಬೇಕು. ಸಿಗುವ ಅವಕಾಶಗಳ ಸದುಪಯೋಗವಾಗಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ ಸಾಮಾಜಿಕ ಕಳಕಳಿ ಬೆಳೆಯಬೇಕಾದರೆ ಸಂಸ್ಕಾರ ಮುಖ್ಯ. ವಿದ್ಯೆ, ಬುದ್ದಿಯ ಜತೆಗೆ ಉತ್ತಮ ಮನಸ್ಸು ಕಟ್ಟುವ ಶಿಕ್ಷಣವೂ ಮುಖ್ಯ ಎಂದರು.
ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ ಅಧಿಕಾರಿ, ಪುರಸಭಾಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ ಶುಭಹಾರೈಸಿದರು.
ಸಮಾರಂಭದಲ್ಲಿ ಎಸ್.ಡಿ.ಎಂ ಸಂಸ್ಥೆಗಳ ವಿದ್ಯಾಥರ್ಿಗಳಾಗಿದ್ದ ಯುವರಾಜ ಜೈನ್ -ರಶ್ಮಿತಾ ದಂಪತಿ ಹಾಗೂ ಕುಟುಂಬಿಕರ ವತಿಯಿಂದ ಧಮರ್ಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸಲಾಯಿತು. ತಮ್ಮ ಸಂಸ್ಥೆಯ ಹಳೆ ವಿದ್ಯಾಥರ್ಿಗಳ ಸಾಧನೆಗಾಗಿ ಯುವರಾಜ ಜೈನ್ -ರಶ್ಮಿತಾ ದಂಪತಿಯನ್ನು ಡಾ.ಹೆಗ್ಗಡೆಯವರು ಸಮ್ಮಾನಿಸಿದರು. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸಂಸ್ಥೆಯ ಬೆಳವಣಿಗೆಯ ಹಾದಿಯನ್ನು ವಿವರಿಸಿದರು. ಕಾರ್ಯದಶರ್ಿ ರಶ್ಮಿತಾ ಯುವರಾಜ ಜೈನ್ ಸ್ವಾಗತಿಸಿದರು. ಪ್ರಾಂಶುಪಾಲ ಕೆ.ಎಸ್.ನಾಗೇಶ್ ವಂದಿಸಿದರು. ಆಡಳಿತಾಧಿಕಾರಿ ಶ್ರುತಕೀತರ್ಿರಾಜ್ ಕಾರ್ಯಕ್ರಮ ನಿರ್ವಹಿಸಿದರು.
