ನವದೆಹಲಿ: 2000ರಲ್ಲಿ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ನಾನು ಭಾಗವಹಿಸಿದ್ದಾಗ ಈ ಸುತ್ತು ಇರಲಿಲ್ಲ ಎಂಬುದನ್ನು ಮೆಲುಕು ಹಾಕಿಕೊಂಡ ಪ್ರಿಯಾಂಕಾ ಚೋಪ್ರಾ ಎತ್ತರದ ಚಪ್ಪಲಿ, ಈಜುಡುಗೆ ಧರಿಸಿ, ಅಷ್ಟೊಂದು ವೀಕ್ಷಕರಿರುವ ವೇದಿಕೆ ಮೇಲೆ ನಡೆಯುವುದು ಅತ್ಯಂತ ಮುಜುಗರವಾಗುತ್ತದೆ ಎಂದಿದ್ದಾರೆ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ ಚೋಪ್ರಾ.
.
ಹಾಗಾಗಿ ಈಜುಕೊಳದ ಸಮೀಪವೊ ಅಥವಾ ಸಮುದ್ರ ತೀರದಲ್ಲೋ ಈಜುಡುಗೆಯ ಸುತ್ತಿನ ಸ್ಪರ್ಧೆ ಆಯೋಜಿಸಿದರೆ ಅಲ್ಲಿನ ವಾತಾವರಣದಲ್ಲಿ ಈಜುಡುಗೆ ತೊಟ್ಟರೆ ಏನೂ ಅನಿಸುವುದಿಲ್ಲ ಎಂದು ನಾಚಿಕೊಂಡಿದ್ದಾರೆ.
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪ್ರಿಯಾಂಕಾ ಸ್ಪರ್ಧಿಸಿದ ಸಮಯದಲ್ಲಿ ಈಜುಡುಗೆಯ ಸುತ್ತು ಇರಲಿಲ್ಲ. ಅಲ್ಲದೇ ಮುಂದಿನ ಸಲದ ಸ್ಪರ್ಧೆಯಿಂದ ಆ ಸುತ್ತನ್ನು ಮತ್ತೆ ರದ್ದುಪಡಿಸಲಾಗಿದ್ದು ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಪಟ್ಟ ಪಡೆಯುವುದು ಸುಲಭವಲ್ಲ, ಇದಕ್ಕಾಗಿ ಸ್ಪರ್ಧಿಗಳು ಸಾಕಷ್ಟು ತಯಾರಿ ಮಾಡಿಕೊಂಡು ಅಲ್ಲಿರುವ ಸವಾಲುಗಳನ್ನು ಎದುರಿಸಬೇಕು.
ಇಂತಹ ಸವಾಲುಗಳಲ್ಲಿ ಈಜುಡುಗೆ ಧರಿಸಿಕೊಂಡು ವೇದಿಕೆ ಮೇಲೆ ನಡೆಯುವ ಸುತ್ತೂ ಒಂದಾಗಿದ್ದು ನಾನಂತೂ ಅದರಿಂದ ತಪ್ಪಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

