ಸುದ್ದಿ9 ಬಂಟ್ವಾಳ; ಪುತ್ತೂರಿನ ಹೋಟೆಲ್ ವೊಂದಕ್ಕೆ ಕೆಲಸಕ್ಕೆ ತೆರಳಿದ್ದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಸಜಿಪಮೂಡ ಗ್ರಾಮದ ಕಂದೂರು ನಿವಾಸಿ ದಿವ್ಯ(23) ನಾಪತ್ತೆಯಾದಾಕೆ. ಪುತ್ತೂರಿನ ಅನ್ನಪೂರ್ಣೇಶ್ವರಿ ಹೋಟೆಲ್ನಲ್ಲಿ ಕ್ಯಾಶಿಯರ್ ಆಗಿದ್ದ ದಿವ್ಯ, ಕಳೆದ ದ.23 ರಂದು ಕೆಲಸಕ್ಕೆಂದು ಹೋದಾಕೆ ನಾಪತ್ತೆಯಾಗಿದ್ದಾಳೆ. ಈ ನಡುವೆ ಇದೇ ಹೋಟೆಲ್ ನಲ್ಲಿ ಮ್ಯಾನೇಜರ್ ಆಗಿದ್ದ ಗಂಗಾಧರ ಎಂಬಾತನೂ ನಾಪತ್ತೆಯಾಗಿದ್ದು, ಈರ್ವರೂ ಜೊತೆಯಲ್ಲಿ ತೆರಳಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಂಟ್ವಾಳ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
