ಸುದ್ದಿ9 ಮೂಡುಬಿದಿರೆ: ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ದಶಮಾನೋತ್ಸವ ಪ್ರಯುಕ್ತ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ 4 ದಿನಗಳ ಕಾಲ ನಡೆಯುವ ತೆಂಕು ಹಾಗೂ ಬಡಗುತಿಟ್ಟು ಯಕ್ಷಗಾನ ಸ್ಪರ್ಧೆ ಗುರುವಾರ ಸಂಜೆ ಆರಂಭಗೊಂಡಿತು.
ಅವಿಭಜಿತ ದ.ಕ ಜಿಲ್ಲೆಯ ಕಾಲೇಜುಗಳು ವಿದ್ಯಾರ್ಥಿಗಳಿಗೆ ನಡೆಯುವ ಸ್ಪರ್ಧೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅವರು ಉದ್ಘಾಟಿಸಿದರು. ತೀರ್ಪುಗಾರರಾಗಿ ಯಕ್ಷಗಾನ ಕಲಾವಿದರಾದ ಸಂಜಯ್ ಕುಮಾರ್ ಗೋಣಿಬೀಡು, ಶರತ್ ಕುಮಾರ್ ಕದ್ರಿ, ದಿವಾಣ ಶಿವ ಶಂಕರ ಭಟ್ ಭಾಗವಹಿಸಿದರು. ಸಂಚಾಲಕ ಸದಾಶಿವ ಶೆಟ್ಟಿಗಾರ್ ಉಪಸ್ಥಿತರಿದ್ದರು. ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆಯ ಮೊದಲ ದಿನವಾದ ಗುರುವಾರ ಮಂಗಳೂರು ಎಸ್ಡಿಎಂ ಬಿಬಿಎಂ ಕಾಲೇಜಿನ ವಿದ್ಯಾಥರ್ಿಗಳಿಂದ ಜಾಂಬವತಿ ಕಲ್ಯಾಣ ಹಾಗೂ ಕಟೀಲು ಶ್ರೀದುಗರ್ಾಪರಮೇಶ್ವರಿ ಪಿಯು ಕಾಲೇಜಿನ ತಂಡದವರಿಂದ ಸುಧನ್ವ ವಿಜಯ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ನಡೆಯಿತು.
ಶುಕ್ರವಾರ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಬುಬ್ರುವಾಹನ ಕಾಳಗ, ಕಾರ್ಕಳ ಭುವನೆಂದ್ರ ಕಾಲೇಜಿನ ವಿದ್ಯಾರ್ಥಿಗಳಿಂದ ಕುಮಾರ್ ವಿಜಯ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜ.3ರಂದು ಉಜಿರೆ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿ ಗಳಿಂದ ನೀಲಧ್ವಜ ಕಾಳಗ ಹಾಗೂ ಬಂಟ್ವಾಳ ಶ್ರೀವೆಂಕಟರಮಣ ಸ್ವಾಮಿ ಕಾಲೇಜಿನ ವಿದ್ಯಾರ್ಥಿಗಳಿಂದ ಸುದರ್ಶನ ಗರ್ವಭಂಗ ಪ್ರದರ್ಶನಗೊಳ್ಳಲಿದೆ.
ಡಿ.4ರಂದು ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ವಿದ್ಯಾರ್ಥಿಗಳಿಂದ ರತ್ನಾವತಿ ಕಲ್ಯಾಣ, ಹಾರಾಡಿ ಎ.ವಿ.ಬಾಳಿಗ ಕಾಲೇಜಿನಿಂದ ಮೀನಾಕ್ಷಿ ಕಲ್ಯಾಣ ಪ್ರದರ್ಶನಗೊಳ್ಳಲಿದೆ. ಬಳಿಕ ಉಡುಪಿ ಎಂ.ಜಿ.ಎಂ. ಕಾಲೇಜಿನಿಂದ ಚಿತ್ರಪಟ ರಾಮಾಯಣ ಹಾಗೂ ಉಡುಪಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಿಂದ ಶಶಿಪ್ರಭಾ ಪರಿಣಯ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.


