ಸುದ್ದಿ9ಮೂಡುಬಿದರೆ: ಮಂಗಳೂರು ವಿವಿ ಎನ್ಎಸ್ಎಸ್ ಯೋಜನೆ ವಿಭಾಗ, ರಾಷ್ಟ್ರೀಯ ಸೇವಾ ಕೋಶ ಇದರ ಸಹಯೋಗದಲ್ಲಿ ಡಿ. 24ರಿಂದ 30ರವರೆಗೆ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಮಂಗಳವಾರ ಮಹಾವೀರ ಕಾಲೇಜಿನಲ್ಲಿ ಸಂಪನ್ನಗೊಂಡಿತು.
ಬೆಂಗಳೂರು ಎನ್ಎಸ್ಎಸ್ ಪ್ರಾದೇಶಿಕ ವಿಭಾಗದ ಮುಖ್ಯಸ್ಥ ಎ.ಎನ್.ಪೂಜಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವ್ಯಕ್ತಿತ್ವ ವಿಕಸನ ಮೂಲಕ ರಾಷ್ಟ್ರೀಯ ಏಕತೆಯ ಮೂಡಿಸುವ ಕೆಲಸ ಶಿಬಿರಗಳಿಂದ ಆಗುತ್ತಿದೆ ಎಂದರು.
ಮಂಗಳೂರು ವಿ.ವಿ. ರಿಜಿಸ್ಟ್ರಾರ್ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಮಹಾವೀರ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಚಂದ್ರಶೇಖರ್ ದೀಕ್ಷಿತ್ ಸ್ವಾಗತಿಸಿದರು. ಮಂಗಳೂರು ವಿವಿ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ವಿನೀತಾ.ಕೆ. ಶಿಬಿರದ ವರದಿ ವಾಚಿಸಿದರು. ಸುರೇಖ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಪ್ರವೀಣ್ ಕುಮಾರ್ ವಂದಿಸಿದರು.
ಶಿಬಿರದಲ್ಲಿ ಕರ್ನಾಟಕ, ಅಂಧ್ರಪ್ರದೇಶ, ಕೇರಳ, ತಮಿಳುನಾಡಿನಿಂದ 150 ಶಿಬಿರಾರ್ಥಿಗಳು ಪಾಲ್ಗೊಂಡರು. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಗಳು ಶಿಬಿರದಲ್ಲಿದ್ದವು.

