ಬಂಟ್ವಾಳ : ಶಬರಿಮಲೆ ಸನ್ನಿಧಿಗೆ ಪಾದಯಾತ್ರೆಯಲ್ಲಿ ತೆರಳುವ ಭಕ್ತಾಧಿಗಳಿಗೆ ತಲಪಾಡಿ ಸಮೀಪದ ಗಡಿಪ್ರದೇಶದಲ್ಲಿ ವಿಶ್ರಾಂತಿಗಾಗಿ ತಂಗುವ ವ್ಯವಸ್ಥೆ ಬಗ್ಗೆ ಗಮನ ಹರಿಸಿದ್ದೇನೆ . ಮುಂದಿನ ದಿನಗಳಲ್ಲಿ ಶಬರಿಮಲೆಯಲ್ಲಿ ಕೂಡ ಕನರ್ಾಟಕದಿಂದ ತೆರಳುವ ಯಾತ್ರಾರ್ಥಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಬೇಕೆಂಬ ಆಶಯವೂ ಇದೆ. ಮಮತ್ರಿ ಪದವಿ , ಸಚಿವ ಪದವಿ , ಶಾಸಕ ಪದವಿ ಇದೆಲ್ಲಾ ತಾತ್ಕಾಲಿಕ , ಆದೇವರ ಕರುಣೆ ಅದು ಶಾಶ್ವತ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನುಡಿದರು .ಅವರು ಅಯ್ಯಪ್ಪ ಭಕ್ತವೃಂದ ಎಳೆಯರ ಬಳಗ ತುಂಬೆ ರಾಮಲ್ಕಟ್ಟೆ ಇದರ 30ನೇ ವರ್ಷದ ಪ್ರಯುಕ್ತ ಅಯ್ಯಪ್ಪ ಸ್ವಾಮಿ ದೀಪೋತ್ಸವ ಮತ್ತು ಕೆಂಡ ಸೇವೆಯ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು .

ಅಯ್ಯಪ್ಪ ಭಕ್ತವೃಂದದವರಿಂದ ಚಾರ್ಮಾಡಿ ಕುಂಜಿರ ಗುರುಸ್ವಾಮಿ ಮತ್ತು ಗುರುಸ್ವಾಮಿ ಆರ್.ಎಸ್.ಜಯ ಯವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ಮಮತಾ ಗಟ್ಟಿ , ಫರಂಗಿಪೇಟೆ ಚರ್ಚ್ ಧರ್ಮಗುರು ಜೆರಾಲ್ಡ್ ಲೋಬೋ , ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ , ನಿಸಾರ್ ಅಹ್ಮದ್ , ಟಿ.ತಾರನಾಥ ಕೊಟ್ಟಾರಿ , ಭೂಬ್ಯಾಂಕ್ ನಾಮ ನಿರ್ಧೇ ಶಿತ ಸದಸ್ಯ ಪ್ರಕಾಶ್ ಬಿ ಶೆಟ್ಟಿ , ಗ್ರಾ.ಪಂ.ಸದಸ್ಯ ದಿನೇಶ್ ರೈ ವಳವೂರು , ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಮಜಿ , ಗಣೇಶ್ ಸುವರ್ಣ , ಉಮೇಶ್ ರೆಂಜೋಡಿ ಉಪಸ್ಥಿತರಿದ್ದರು . ಸದಾಶಿವ ಡಿ.ತುಂಬೆ ಸ್ವಾಗತಿಸಿದರು . ಸಂಜೀವ ಪೂಜಾರಿ , ವಂದಿಸಿ ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು
