ಮಂಗಳೂರು: ನಿವೃತ್ತ ಸೇನಾಧಿಕಾರಿ, ಲೇಖಕ, ಸಾಹಿತಿ, ಚೇಳಾರ್ಗುತ್ತು ಎಸ್.ಆರ್.ಹೆಗ್ಡೆ ನಿಧನಕ್ಕೆ ವಿಶ್ವ ತುಳುವರೆ ಪರ್ಬ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಉವರ್ಾ ಬಳಿ ಇರುವ ಮಹಿಳಾ ಒಕ್ಕೂಟದ ಕಚೇರಿಯಲ್ಲಿ ನಡೆದ ಸಂತಾಪ ಸಭೆಯಲ್ಲಿ ವಿಶ್ವ ತುಳುವೆರೆ ಪರ್ಬ ಸಮಿತಿಯ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ಮಾತನಾಡಿ ಎಸ್.ಆರ್.ಹೆಗ್ಡೆ ಬೆಂಗಳೂರಿನಲ್ಲಿ ತುಳು ಕೂಟ ಸಹಿತ ಬೇರೆ ಬೇರೆ ಸಂಘಟನೆಗಳಲ್ಲಿ ದುಡಿದವರು.
ತನ್ನ ಜೀವನದುದ್ದಕ್ಕೂ ಶಿಸ್ತನ್ನು ಪಾಲಿಸಿದವರು. `ಅಗೋಳಿ ಮಂಜಣ್ಣ’ನ ನೆಂಪು ಕಾರ್ಯಕ್ರಮವನ್ನು ಚೇಳಾರ್ಗುತ್ತುವಿನಲ್ಲಿ ಆಯೋಜಿಸಿ ಬಹಳಷ್ಟು ತುಳು ಕಾರ್ಯಕ್ರಮಗಳಿಗೆ ಒತ್ತು ನೀಡಿ ತುಳು ಭಾಷಾ ಬೆಳವಣಿಗೆಗೆ ಸಹಕಾರಿಯಾದವರು. ವಿಶ್ವ ತುಳುವೆರೆ ಪರ್ಬದ ಸಂದರ್ಭದಲ್ಲಿ ಅವರು ತನ್ನನ್ನು ತೊಡಗಿಸಿಕೊಂಡು ಪರ್ಬದ ಯಶಸ್ಸಿನಲ್ಲಿ ಭಾಗಿಯಾಗಿದ್ದರೆಂದು ಅವರು ಶ್ರದ್ದಾಂಜಲಿ ಸಭೆಯಲ್ಲಿ ತಿಳಿಸಿದರು.
ಸಮಿತಿಯ ಪದಾಧಿಕಾರಿಗಳಾದ ಎ.ಸಿ.ಭಂಡಾರಿ, ಮಹಾಬಲ ಶೆಟ್ಟಿ ಅಡ್ಯಾರ್, ನಿಟ್ಟೆ ಶಶಿಧರ ಶೆಟ್ಟಿ, ದಾಮೋದರ ನಿಸರ್ಗ, ಕರುಣಾಕರ ಶೆಟ್ಟಿ ಮುಲ್ಕಿ, ಚಂದ್ರಶೇಖರ ಸುವರ್ಣ, ಪಿ.ಎ.ಪೂಜಾರಿ, ಬೋಳಾರ ತಾರಾನಾಥ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಲೀಲಾಕ್ಷ ಕಕರ್ೆರಾ, ಚಂದ್ರಶೇಖರ ರೈ, ಜಗನ್ನಾಥ್ ಶೆಟ್ಟಿ ಬಾಳ ಮೊದಲಾದವರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.
