ಬಂಟ್ವಾಳ : ತಾಲೂಕಿನ ಮಿನಿವಿಧಾನ ಸೌಧ ನಿಮರ್ಾಣಕ್ಕೆ ನಿಗದಿಪಡಿಸಿದ್ದ ಅನುದಾನವನ್ನು 10 ಕೋಟಿ ರೂ ಗೆ ಹೆಚ್ಚಿಸಲಾಗಿದ್ದು, ಸಕರ್ಾರದಿಂದ ಮಂಜೂರಾತಿಗೊಂಡಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
1
ಬಂಟ್ವಾಳ ತಾಲೂಕು ಪಂಚಾಯತ್ ನಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಇಲಾಖಾವಾರು ಪ್ರಗತಿಪರಿಶೀಲನೆ ವೇಳೆ ಈ ವಿಚಾರ ಸಭೆಗೆ ವಿವರಿಸಿದರು.

ಮೊದಲಹಂತದಲ್ಲಿ ನೆಲಅಂತಸ್ತು ಹಾಗೂ ಮಿನಿ ವಿಧಾನ ಸೌಧ ನಿಮರ್ಾಣಗೊಳ್ಳಲಿದ್ದು ಇದಕ್ಕಾಗಿ ಈ ಮೊದಲೇ 5 ಕೋಟಿ ರೂ ಮಂಜೂರಾಗಿದೆ, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆದು, ಕಾಮಗಾರಿ ಆರಂಭಗೊಳ್ಳಲಿದ್ದು, ಎರಡನೇ ಹಂತದ ಕಾಮಗಾರಿಗೂ ಹೆಚ್ಚುವರಿಯಾಗಿ 5 ಕೋಟಿ ಹಣ ಮಂಜೂರಾಗಿದೆ ಎಂದವರು ವಿವರಿಸಿದರು.

ತಾಲೂಕಿನಲ್ಲಿ ಸ್ವಂತ ನಿವೇಶನಗಳಿಲ್ಲದ ಅಂಗನವಾಡಿ ಕೇಂದ್ರಗಳಿಗೆ ಶೀಘ್ರ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಅಂಗನವಾಡಿ ನಿಮರ್ಾಣಕ್ಕೆ ಶಾಸಕನಿಧಿಯಿಂದ 1 ಲಕ್ಷ ರೂ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಬಂಟ್ವಾಳ ಹಾಗೂ ವಿಟ್ಲ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಬೇಡಿಕೆಗೆ ಸ್ಪಂದಿಸಿದ ಸಚಿವ ರೈ, ಅಂಗನವಾಡಿಗಳಿಗೆ ಸ್ವಂತ ನಿವೇಶನ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ಕೊಳೆರೋಗದಿಂದ ಸಂತ್ರಸ್ರರಾಗಿರುವ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಲು ಸಕರ್ಾರದಿಂದ ಇನ್ನೂ 3 ಕೋಟಿ ಅನುದಾನ ಬರಬೇಕಿದ್ದು, ಈಗಿರುವ 65 ಲಕ್ಷ ರೂ ಅನುದಾನವನ್ನು ಸಣ್ಣ ರೈತರಿಗೆ ಹಂಚಿಕೆ ಮಾಡುವ ಬಗ್ಗೆ ತೀಮರ್ಾನಿಸಲಾಗಿದೆ ಎಂದು ತಹಶೀಲ್ದಾರ್ ಇಸಾಖ್ ಸಭೆಗೆ ಮಾಹಿತಿ ನೀಡಿದರು. ಪುಣಚ ಗ್ರಾಮದಲ್ಲಿ ನೀರುಸರಬರಾಜು ಕೇಂದ್ರವೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು, ಸ್ಥಳೀಯ ಕೃಷಿಕರೊಬ್ಬರು ಅಡ್ಡಿ ಪಡಿಸುತ್ತಿರುವ ಬಗ್ಗೆ ಮೆಸ್ಕಾಂ ಸಿಬ್ಬಂದಿಗಳು ಸಚಿವರ ಮುಂದೆ ದೂರಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ರೈ, ಸಣ್ಣ ಹಿಡುವಳಿದಾರರಿಗೆ ತೊಂದರೆಯಾಗುವಂತೆ ಕಾಮಗಾರಿ ಮಾಡಬೇಡಿ, ಪಯರ್ಾಯ ವ್ಯವಸ್ಥೆ ಕಲ್ಪಿಸಿ ಎಂದು ಸಲಹೆ ನೀಡಿದರು.
ಹೆಚ್ಐವಿ ಪೀಡಿತರಿಗೆ ಚಿಕಿತ್ಸೆ ನೀಡುವ ಬದಲಾಗಿ, ಮಂಗಳೂರಿಗೆ ಸ್ನೇಹಸದನಕ್ಕೆ ಕಳುಹಿಸಿಕೊಡುವುದು ಸರಿಯಲ್ಲ, ಈ ಬಗ್ಗೆ ವೈದ್ಯಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು , ತಾಲೂಕಿನಲ್ಲಿ ಶೀಘ್ರ ಡಯಾಲಿಸೀಸ್ ಕೇಂದ್ರ ಸ್ಥಾಪನೆಗೆ ಹೆಚ್ಚಿನ ಮುತುವಜರ್ಿ ವಹಿಸುವಂತೆ ಎಂದು ಸಚಿವ ರೈ ಸೂಚನೆ ನೀಡಿದರು.

ಪುತ್ತೂರು ತಾಲೂಕಿನಲ್ಲಿ ಅರಣ್ಯ ಇಲಾಖೆಗೆ ಸೇರಿದ್ದ ಸುಮಾರು 17 ಸಾವಿರ ಎಕ್ರೆ ಜಮೀನು ಕಂದಾಯ ಇಲಾಖೆಗೆ ಹಸ್ತಾಂತರಗೊಳ್ಳಲಿದೆ. ಒತ್ತುವರಿಯಾದ ಅರಣ್ಯ ಇಲಾಖಾ ಜಮೀನನ್ನು ವಶಪಡಿಸಿಕೊಂಡರೆ ಅದು ದೊಡ್ಡ ಸುದ್ದಿಯಾಗುತ್ತದೆ, ಆದರೆ ಅರಣ್ಯ ಇಲಾಖೆ ಎಕ್ರೆಗಟ್ಟಲೆ ಜಮೀನು ವಾಸ್ತವ್ಯಕ್ಕೆ ನೀಡಿದರೆ ಅದು ಹೆಚ್ಚು ಪ್ರಚಾರವಾಗುವುದೇ ಇಲ್ಲ ಎಂದವರು ವಿಷಾಧ ವ್ಯಕ್ತಪಡಿಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ, ಉಪಾಧ್ಯಕ್ಷೆ ವಿಲಾಸಿನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಹೈಡಾ ಸುರೇಶ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದ ಮೊದಲಾವದರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿ.ಪಂ.ಸದಸ್ಯರಾದ ಮಮತಾಗಟ್ಟಿ, ಎಂ.ಎಸ್.ಮಹಮ್ಮದ್, ಸಂತೋಷ್ ಕುಮಾರ್ ರೈ, ಚಂದ್ರಪ್ರಕಾಶ ಶೆಟ್ಟಿ ಹಾಗೂ ಕೆಡಿಪಿ ಸದಸ್ಯರು ಚಚರ್ೆಯಲ್ಲಿ ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *