ಬಂಟ್ವಾಳ: ಇಲಿಜ್ವರ ಸೋಂಕಿನಿಂದ ಸಾವಿಗೀಡಾದ ಬಿ.ಮೂಡ ಗ್ರಾಮದ ಪಲ್ಲಮಜಲು ನಿವಾಸಿ ವಿಶ್ವನಾಥ್ ಕುಟುಂಬಕ್ಕೆ ಸರಕಾರ 2ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮೊಕ್ರಟಿಕ್ ಪಾಟರ್ಿ ಆಫ್ ಇಂಡಿಯಾದ ಬಂಟ್ವಾಳ ವಿಧಾನ ಕ್ಷೇತ್ರ ಸಮಿತಿ ವತಿಯಿಂದ ನಿನ್ನೆ ಪುರಸಭೆ ಕಾಯರ್ಾಲಯದ ಎದುರು ಪ್ರತಿಭಟನೆ ನಡೆಯಿತು.
27FSDPI2

27FSDPI1
ಪಲ್ಲಮಜಲು ವಾಡರ್್ನ ರಸ್ತೆ, ಚರಂಡಿ, ತ್ಯಾಜ್ಯ ನಿರ್ವಹಣೆ, ಸ್ವಚ್ಛತಾ ಕಾರ್ಯಕ್ಕೆ ತತ್ಕ್ಷಣ ಅನುದಾನ ಬಿಡುಗಡೆ ಮಾಡಬೇಕು. ಪಲರ್ಿಯಾ ವಾಡರ್್ನ ಚರಂಡಿ ಅಸ್ತವ್ಯಸ್ತವನ್ನು ಪರಿಹರಿಸಬೇಕು. ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ತಂತಿ, ವಿದ್ಯುತ್ ಕಂಬಗಳನ್ನು ಮುಂದಿನ 15 ದಿನಗಳೊಳಗೆ ದುರಸ್ತಿಗೊಳಿಸಬೇಕೆಂದು ಎಸ್ಡಿಪಿಐ ಮುಖಂಡರು ಒತ್ತಾಯಿಸಿದರು.
ಪುರಸಭಾಧ್ಯಕ್ಷೆಗೆ ಕಪ್ಪು ಬಾವುಟ ಪ್ರದಶರ್ಿಸಿದ ಆರೋಪದಲ್ಲಿ ಪೊಲೀಸ್ ಠಾಣೆಗೆ ಸುಳ್ಳು ನೀಡಲಾಗಿದೆ. ನಾಗರಿಕರ ಪ್ರತಿಭಟನೆಯನ್ನು ಹತ್ತಿಕ್ಕಲು ದಲಿತ ದೌರ್ಜನ್ಯ ಕಾಯಿದೆಯಡಿ ದುರ್ಬಳಕೆ ಮಾಡಲಾಗಿದೆ. ಪ್ರಕರಣದ ಬಗ್ಗೆ ಪೊಲೀಸ್ ಉನ್ನತಾಧಿಕಾರಿಗಳು ಸಮರ್ಪಕ ತನಿಖೆ ನಡೆಸಬೇಕು. ಅಮಾಯಕ ಯುವಕರ ವಿರುದ್ಧ ನೀಡಲಾದ ದೂರನ್ನು ವಾಪಾಸು ಪಡೆಯುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು ಈ ಕುರಿತು ಪುರಸಭೆಗೆ ಠರಾವು ಮಂಡಿಸಿದರು. ಬಿ.ಸಿ.ರೋಡು ತಾಲೂಕು ಕಚೇರಿಯಿಂದ ಬಂಟ್ವಾಳ ಪುರಸಭಾ ಕಾರ್ಯಾಲಯ ತನಕ ಕಾರ್ಯಕರ್ತರು ಕಾಲ್ನಡಿಗೆ ಜಾಥ ನಡೆಸಿದರು. ಪುರಸಭಾ ಸದಸ್ಯರಾದ ಮಹಮ್ಮದ್ ಇಕ್ಬಾಲ್, ಮುನೀಶ್ ಅಲಿ, ಮಮ್ತಾಜ್, ದಲಿತ ಸಂಘರ್ಷ ಸಮಿತಿ ಮುಖಂಡ ಕೂಸಪ್ಪ, ದಲಿತ ಮುಖಂಡ ಆನಂದ ಮಿತ್ತಬೈಲು, ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಯೂಸುಫ್ ಆಲಡ್ಕ, ಮುಖಂಡರಾದ ರಿಯಾಝ್ ಫರಂಗಿಪೇಟೆ, ಸಾಹುಲ್ ಎಸ್.ಎಚ್. ನೇತೃತ್ವ ವಹಿಸಿದರು.
ಚಿತ್ರ: 27ಎಫ್ಎಸ್ಡಿಪಿಐ (ಬಂಟ್ವಾಳ ಪುರಸಭೆ ಕಾರ್ಯಾಲಯ ಎದುರು ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟಿಸಿದರು.)

By suddi9

Leave a Reply

Your email address will not be published. Required fields are marked *