ಬಂಟ್ವಾಳ : ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜಿಪ ಮುನ್ನೂರು ಇದರ ನವೀಕರಣ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕರ್ನಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ದೇವಸ್ಥಾನದ ಗೌರವಾಧ್ಯಕ್ಷ ಯಂ.ಎಸ್.ಕೃಷ್ಣ ಭಟ್ ಬಿಡುಗಡೆಗೊಳಿಸಿದರು .

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯಶಂಕರ ಬ್ರಾಸಿತ್ತಾಯ ಅದ್ರುಕ್ಕು , ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ದಿನೇಶ್ ಭಂಡಾರಿ ಆಳ್ವರಪಾಲು , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೇದಮೂರ್ತಿ ಎನ್.ಶಿವರಾಮ ಮಯ್ಯ , ಅರ್ಚಕ ಕೃಷ್ಣ ಭಟ್ , ಸಲಹೆಗಾರ ಸುಬ್ರಹ್ಮಣ್ಯ ಭಟ್ , ಎನ್. ಕೆ.ಶಿವ ಖಂಡಿಗ , ಹರಿಪ್ರಸಾದ್ ಭಂಡಾರಿ ಆಳ್ವರ ಪಾಲು , ಚಿತ್ರಾ ಎಸ್ ರೈ ಪರಾರಿ ಹೊಸಮನೆ , ದೇವಪ್ಪ ಮಡಿವಾಳ ಪಡ್ಪು , ಶ್ರೀನಿವಾಸ ನಾಯಕ್ ದಾಸರಗುಡ್ಡೆ , ಎನ್.ಶಶಿರಾಜ್ ರಾವ್ ಪೆರ್ಮಂಕಿ , ಟಿ.ಸುಬ್ರಾಯ ಕಾರಂತ ಕಾನ್ಸಾಲೆ , ಧನೇಶ್ವರ ರಾವ್ ಅಂತರ , ನವೀನ್ ಸುವರ್ಣ ಮಿತ್ತಕಟ್ಟ ಮತ್ತಿತರರು ಉಪಸ್ಥಿತರಿದ್ದರು
